alex Certify ಈ ಮ್ಯೂಸಿಯಂನಲ್ಲಿದೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್ ಬಳಸಿದ್ದ ಜೀಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮ್ಯೂಸಿಯಂನಲ್ಲಿದೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್ ಬಳಸಿದ್ದ ಜೀಪ್

ಕಾಡುಗಳ್ಳ, ದಂತಚೋರ ವೀರಪ್ಪನ್ ಪತ್ತೆ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿಭಾಯಿಸಿ ವೀರ ಮರಣವನ್ನಪ್ಪಿದ್ದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರು ಬಳಸಿದ್ದ ಜೀಪ್ ಅನ್ನು ದುರಸ್ತಿ ಮಾಡಿಸಿ ಮ್ಯೂಸಿಯಂನಲ್ಲಿಡಲಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ನರಹಂತಕ ವೀರಪ್ಪನ್ ನ ವಿರುದ್ಧ ಕಾರ್ಯಾಚರಣೆಯಲ್ಲಿ ಪಿ.ಶ್ರೀನಿವಾಸ್ ಅವರು ಬಳಸಿದ್ದ ಜೀಪ್ ಇದಾಗಿದೆ.

ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್‌ ಹಾಡು ಹಾಡಿದ ʼದಾದಿ ಮಾʼ

ಶ್ರೀನಿವಾಸ್ ಅವರು ಹತರಾದ ಬಳಿಕ ಈ ಜೀಪನ್ನು ಕರ್ನಾಟಕ ಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡು ಗಡಿ ಪ್ರದೇಶವಾದ ಪಾಲಾರ್ ನಲ್ಲಿ ಬಿಡಲಾಗಿತ್ತು. ಆದರೆ, ಮಲೆ ಮಹದೇಶ್ವರ ಅರಣ್ಯ ವನ್ಯಜೀವಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಕರಾದ ವಿ.ಏಡುಕೊಂಡಲು ನೇತೃತ್ವದ ಅರಣ್ಯಾಧಿಕಾರಿಗಳ ತಂಡವು ಈ ಜೀಪನ್ನು ರಿಪೇರಿ ಮಾಡಿಸಿ ಶ್ರೀನಿವಾಸ್ ಹೆಸರಿನಲ್ಲಿರುವ ವಸ್ತು ಸಂಗ್ರಾಹಾಲಯದಲ್ಲಿ ಇಟ್ಟಿದ್ದಾರೆ.

ಈ ಜೀಪನ್ನು ರಿಪೇರಿ ಮಾಡಿಸಲು 1.1 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿರುವ ಏಡುಕೊಂಡಲು, ಈ ವಸ್ತು ಸಂಗ್ರಾಹಾಲಯದಲ್ಲಿ ಶ್ರೀನಿವಾಸ್ ಅವರು ವೀರಪ್ಪನ್ ಪತ್ತೆ ಕಾರ್ಯಾಚರಣೆಯಲ್ಲಿ ಬಳಸುತ್ತಿದ್ದ ಸಮವಸ್ತ್ರ, ಅವರ ಕಾರ್ಯಾಚರಣೆಯ ಅಪರೂಪದ ಛಾಯಾಚಿತ್ರಗಳು ಸೇರಿದಂತೆ ಇನ್ನಿತರೆ ಪರಿಕರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...