alex Certify ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್‌ ಹಾಡು ಹಾಡಿದ ʼದಾದಿ ಮಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್‌ ಹಾಡು ಹಾಡಿದ ʼದಾದಿ ಮಾʼ

ಭಾರತೀಯ ನಾರಿಯರು ಮಗಳಾಗಿ, ತಾಯಿಯಾಗಿ ಮತ್ತು ನಂತರ ಅಜ್ಜಿಯಾಗಿ ಕುಟುಂಬದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಇದೀಗ ದೇಸಿ ದಾದಿ ಮಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅಲ್ಲಿ ಅವರು ಹಾರ್ಮೋನಿಯಂ ನುಡಿಸುತ್ತಾ ಹಾಡಿದ್ದಾರೆ.

ಮೆಜೆಂಟಾ ಸೀರೆಯನ್ನು ಧರಿಸಿದ ವೃದ್ಧೆ ಹಾರ್ಮೋನಿಯಂ ಹಿಡಿದು, ಹೊರಗೆ ಬಯಲಿನಲ್ಲಿ ಹಾಡಿದ್ದಾರೆ. ಆಕೆಯ ಹಿಂದೆ ಕುಳಿತಂತಹ ವ್ಯಕ್ತಿಯೊಬ್ಬರು ಹಾಡಿಗೆ ತಕ್ಕಂತೆ ಢೋಲಕ್ ನುಡಿಸಿದ್ದಾರೆ. ದಿವಂಗತ ದಂತಕಥೆ ಲತಾ ಮಂಗೇಶ್ಕರ್ ಅವರ ಭಾವಪೂರ್ಣ ಹಾಡನ್ನು ಹಾಡಿದ್ದಾರೆ.

1970ರ ಹೀರ್ ರಾಂಝಾ ಚಿತ್ರದ ‘ಮಿಲೋ ನಾ ತುಮ್ ತೋ ಹಮ್ ಘಬ್ರೇ’ ಎಂಬ ಹಾಡನ್ನು ದಾದಿ ಮಾ ಆಯ್ಕೆ ಮಾಡಿಕೊಂಡಿದ್ದಾರೆ. ಹಾಡುತ್ತಾ ಅವರು ಹಾರ್ಮೋನಿಯಂ ಅನ್ನು ಸುಂದರವಾಗಿ ನುಡಿಸುವುದನ್ನು ಕಾಣಬಹುದು.

ನೆಟ್ಟಿಗರು ದೇಸಿ ದಾದಿಯ ಸುಮಧುರ ಧ್ವನಿಯನ್ನು ಇಷ್ಟಪಟ್ಟಿದ್ದಾರೆ. ಆಕೆಯ ಬಗ್ಗೆ ಪ್ರೀತಿ ಮತ್ತು ಪ್ರಶಂಸೆಯೊಂದಿಗೆ ಕಾಮೆಂಟ್‌ಗಳನ್ನು ತುಂಬಿದ್ದಾರೆ.

ವಿಡಿಯೋ ಕೃಪೆ: ಅಜ್‌ ತಕ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...