alex Certify ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಬಿಲ್ಡರ್‌‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಬಿಲ್ಡರ್‌‌

ಬೆಂಗಳೂರಿನ ಅತ್ಯಂತ ದೊಡ್ಡ ಬಿಲ್ಡರ್‌ಗಳಲ್ಲಿ ಒಬ್ಬರಾದ ರೋಹನ್ ಮೊಂಟೇರಿಯೋ ಅವರು ದಕ್ಷಿಣ ಭಾರತದಲ್ಲಿ ಬೆಂಟ್ಲಿ ಬೆಂಟಾಯ್ಗಾ ಕಾರನ್ನು ಖರೀದಿ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ರೋಹನ್ ಬಿಲ್ಡರ್ಸ್‌ನ ಮುಖ್ಯಸ್ಥ ಮೊಂಟೇರಿಯೋ ಬ್ರಿಟೀಷ್‌ ಆಟೋಮೊಬೈಲ್ ಕಂಪನಿಯ ಎಸ್‌ಯುವಿಯ ವಿ8 ಅವತರಣಿಕೆಯನ್ನು ತಮ್ಮ ಕಾರುಗಳ ಸಂಗ್ರಹಕ್ಕೆ ಸೇರಿಸಿದ್ದಾರೆ. 6.5 ಕೋಟಿ ರೂ. ಬೆಲೆಯ ಈ ಕಾರು ಸಿರಿವಂತರ ಪಾಲಿನ ಪ್ರತಿಷ್ಠೆಯ ಸಂಕೇತಗಳಲ್ಲಿ ಒಂದಾಗಿದೆ.

ನ್ಯಾಯಾಂಗದ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ತ್ರಿಪುರಾ ಸಿಎಂ

4.0-ಲೀಟರ್‌, 32-ವಾಲ್ವ್‌‌ ಅವಳಿ ಸ್ಕ್ರೋಲ್ ಟರ್ಬೋಚಾರ್ಜ್‌ ವಿ8 ಪೆಟ್ರೋಲ್ ಇಂಜಿನ್‌ ಜೊತೆಗೆ ಸ್ವಯಂಚಾಲಿತ ಎಂಟು ಹಂತದ ವೇಗ, 404ಕಿಲೋ ವ್ಯಾಟ್‌ ಪವರ್‌, 770ಎನ್‌ಎಂ ಟಾರ್ಕ್‌ಗಳ ಬಲಶಾಲಿ ಪ್ರದರ್ಶನದ ಕ್ಷಮತೆ ವಿ8 ಕಾರಿಗೆ ಇದೆ. ಕೇವಲ 4.5 ಸೆಕೆಂಡ್‌ಗಳಲ್ಲಿ 100ಕಿಮೀ/ಗಂಟೆಯ ವೇಗ ತಲುಪಬಲ್ಲ ಬೆಂಟಾಯ್ಗಾ 290ಕಿಮೀ/ಗಂಟೆಯಷ್ಟು ಟಾಪ್ ಸ್ಪೀಡ್ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...