alex Certify ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಜಿ ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಿಚ್ಚಿಟ್ಟ ನಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಜಿ ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಿಚ್ಚಿಟ್ಟ ನಟ….!

ಕಿರುತೆರೆ ನಟ ಕರಣ್ ಮೆಹ್ರಾ ಹಾಗೂ ಆತನ ಮಾಜಿ ಪತ್ನಿ ನಿಶಾ ರಾವಲ್ ನಡುವಿನ ಜಗಳ ಈಗ ಮತ್ತೆ ಬೀದಿಗೆ ಬಂದಿದೆ. 2021 ರಲ್ಲಿ ಪರಸ್ಪರರ ವಿರುದ್ಧ ಅನೈತಿಕ ಸಂಬಂಧದ ಆರೋಪ ಹೊರಿಸಿ ಈ ಜೋಡಿ ಠಾಣೆಯ ಮೆಟ್ಟಿಲು ಏರಿದ್ದು, ಇದೀಗ ಕರಣ್ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಿಚ್ಚಿಟ್ಟಿದ್ದಾರೆ.

ಮುಂಬೈನಲ್ಲಿ ಆಗಸ್ಟ್ ನಾಲ್ಕರಂದು ಪತ್ರಿಕಾಗೋಷ್ಠಿ ನಡೆಸಿದ ಕರಣ್, ನಿಶಾ, ರೋಹಿತ್ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಆತ ನನ್ನ ರಾಖಿ ಬ್ರದರ್ ಎಂದು ಹೇಳುತ್ತಿದ್ದಳಾದರೂ ಅವರ ನಡುವೆ ಬೇರೆಯದೆ ಆದ ಸಂಬಂಧ ಇತ್ತು ಎಂದಿದ್ದಾನೆ.

ಆತ ನಮ್ಮ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಹೇಳಿದ ಕರಣ್, ನಿಶಾಳಿಂದ ನಾನು ಬೇರೆಯಾದ ಬಳಿಕ ಮಗನನ್ನು ನೋಡಲು ಸಹ ಅವಕಾಶ ಸಿಗುತ್ತಿಲ್ಲ. ನನ್ನ ಮನೆಗೆ ನಾನು ಹೋಗಲು ಭಯ ಪಡುವಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಸಹ ಬರುತ್ತಿದ್ದು, ನಾನು ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ ಎಂದು ಕರಣ್ ಆರೋಪಿಸಿದ್ದಾರೆ. ಅಲ್ಲದೆ ಕಾನೂನು ಹೋರಾಟ ನಡೆಸುವುದಾಗಿಯೂ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...