alex Certify Big News: ಬೆಚ್ಚಿಬೀಳಿಸುವಂತಿದೆ ಪಾಕ್‌ ನ ಕರಾಚಿ ವಿವಿಯಲ್ಲಿ ನಡೆದ ಸ್ಪೋಟದ ಹಿಂದಿನ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಬೆಚ್ಚಿಬೀಳಿಸುವಂತಿದೆ ಪಾಕ್‌ ನ ಕರಾಚಿ ವಿವಿಯಲ್ಲಿ ನಡೆದ ಸ್ಪೋಟದ ಹಿಂದಿನ ರಹಸ್ಯ

ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಆತ್ಮಹತ್ಯಾ ಬಾಂಬ್ ದಾಳಿ ಕೃತ್ಯದಲ್ಲಿ ಮಹಿಳೆ ಪಾತ್ರವಿರುವುದು ಸ್ಪಷ್ಟವಾಗಿದೆ.

ಘಟನೆ ನಡೆದ ಆವರಣದಲ್ಲಿ ಬುರ್ಕಾಧಾರಿ ಮಹಿಳಾ ಬಾಂಬರ್ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ವ್ಯಾನ್ ಒಳಗೆ ಪ್ರವೇಶಿಸುವ ವೇಳೆಗೆ ತನ್ನನ್ನು ತಾನು ಸ್ಫೋಟಿಸಿಕೊಂಡು ಈ ದುಷ್ಕೃತ್ಯವನ್ನು ಎಸಗಿದ್ದಾಳೆ. ಈ ಆಘಾತಕಾರಿ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ವಿಡಿಯೋವನ್ನು ಬಿತ್ತರ ಮಾಡಿದೆ.

ಈ ದೃಶ್ಯಾವಳಿಗಳ ಪ್ರಕಾರ ಚೀನಾ ನಿರ್ಮಿತ ಕನ್ ಫ್ಯೂಷಿಯಸ್ ಇನ್ ಸ್ಟಿಟ್ಯೂಟ್ ನ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಈ ಕಟ್ಟಡದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಚೈನೀಸ್ ಭಾಷೆಯನ್ನು ಹೇಳಿಕೊಡಲಾಗುತ್ತಿದೆ.

ಈ ದುಷ್ಕೃತ್ಯದ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆ ಹೊತ್ತುಕೊಂಡಿದ್ದು, ಶಾರಿ ಬಲೂಚ್ ಎಂಬ ಮಹಿಳಾ ಸದಸ್ಯೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾಳೆ ಎಂದು ಸಂಘಟನೆಯ ವಕ್ತಾರ ಹೇಳಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವವಿದ್ಯಾಲಯದ ವಕ್ತಾರ, ಘಟನೆಯಲ್ಲಿ ಮೂವರು ಚೀನಾ ಪ್ರಜೆಗಳು ಸಾವನ್ನಪ್ಪಿದ್ದು, ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಹುಹಾಂಗ್ ಗ್ಯುಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾ ಮತ್ತು ಪಾಕಿಸ್ತಾನ ಮೂಲದ ವಾಹನ ಚಾಲಕ ಖಾಲಿದ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

— Republic (@republic) April 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...