alex Certify ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಚಿತ್ರ ವಿಡಿಯೋಗಳಿಗೆ ಅಭಿಮಾನಿ ಬಳಗವೇ ಇದೆ. ಆದರೆ ಈ ಬಾರಿ ವೈರಲ್​ ಆಗಿರುವ ಈ ವಿಡಿಯೋ ಮಾತ್ರ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ.

ವಿಡಿಯೋದಲ್ಲಿ ಪಾರ್ಕ್​ ಮಾಡಲಾಗಿದ್ದ ಬೈಕ್​​ ಒಂದು ತನ್ನಿಂದ ತಾನೇ ಚಲಾವಣೆ ಆಗೋದನ್ನ ಕಾಣಬಹುದಾಗಿದೆ. 30 ಸೆಕೆಂಡ್​ಗಳ ಸಿಸಿ ಟಿವಿ ದೃಶ್ಯಾವಳಿಯನ್ನ ಅಂಬೇರ್ ಝೈದಿ ಎಂಬ ಟ್ವಿಟರ್​ ಖಾತೆ ಮೂಲಕ ಶೇರ್​ ಮಾಡಲಾಗಿದೆ. ಇದನ್ನ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿಸಿ ಟಿವಿ ದೃಶ್ಯಾವಳಿಯಲ್ಲಿ, ಎರಡು ಬೈಕ್​ಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿರೋದನ್ನ ನೀವು ಕಾಣಬಹುದು. ಕೆಲವೇ ಕ್ಷಣಗಳಲ್ಲಿ ಒಂದು ಬೈಕ್​ ತನ್ನಿಂದ ತಾನೇ ಚಲಿಸೋಕೆ ಆರಂಭಿಸುತ್ತೆ. ವೃತ್ತಾಕಾರವಾಗಿ ಸವಾರಿ ಮಾಡಿದ ಬೈಕ್​ ಬಳಿಕ ಬಿದ್ದು ಹೋಗಿದೆ.

— Amber Zaidi 🇮🇳 (@Amberological) February 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...