alex Certify ಸುರಂಗ ಕೊರೆದು SBI ನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಂಗ ಕೊರೆದು SBI ನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಕಾನ್ಪುರ: ದರೋಡೆಕೋರರು ಸುರಂಗ ಕೊರೆದು ಕಾನ್ಪುರದ ಎಸ್‌ಬಿಐ ಶಾಖೆಯಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಕಾನ್ಪುರದ ಸಚೇಂದಿಯಲ್ಲಿರುವ ಎಸ್‌ಬಿಐ ಶಾಖೆಯಿಂದ ಶುಕ್ರವಾರ ದರೋಡೆ ನಡೆಸಲು ದರೋಡೆಕೋರರು ಸುರಂಗ ಕೊರೆದಿದ್ದಾರೆ. 1 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರ ತಂಡ ದೋಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ಕಳ್ಳರು ಲಾಕರ್ ತೆರೆಯಲು ಗ್ಯಾಸ್ ಕಟ್ಟರ್ ಬಳಸಿದ್ದಾರೆ. ಅವರು ಅಲಾರಾಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಸ್ಟ್ರಾಂಗ್‌ರೂಮ್‌ನಲ್ಲಿರುವ ಏಕೈಕ ಸಿಸಿಟಿವಿ ಕ್ಯಾಮೆರಾವನ್ನು ಬೇರೆ ಕಡೆಗೆ ತಿರುಗಿಸಿದ್ದಾರೆ.

ಸುಮಾರು 1 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ತಂಡ ಸ್ಥಳದಲ್ಲಿದ್ದು, ಪ್ರಕರಣದ ತನಿಖೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...