alex Certify ತನ್ನನ್ನು ತಾನೇ ‘ದೇಶ ಕಂಡ ಶಕ್ತಿಶಾಲಿ ಮಹಿಳೆ’ ಎಂದು ಹೊಗಳಿಕೊಂಡ ಕಂಗನಾ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನನ್ನು ತಾನೇ ‘ದೇಶ ಕಂಡ ಶಕ್ತಿಶಾಲಿ ಮಹಿಳೆ’ ಎಂದು ಹೊಗಳಿಕೊಂಡ ಕಂಗನಾ​..!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತನ್ನನ್ನು ತಾನು ದೇಶದ ಶಕ್ತಿಶಾಲಿ ಮಹಿಳೆ ಎಂದು ಕರೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಗನಾ ರಣಾವತ್​​​ರ ಭವಿಷ್ಯದ ಪೋಸ್ಟ್​ಗಳ ಮೇಲೆ ಸೆನ್ಸಾರ್​ ಹೇರಿಕೆ ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕಂಗನಾ ಈ ಹೇಳಿಕೆ ನೀಡಿದ್ದಾರೆ. ಖಲಿಸ್ತಾನಿ ಭಯೋತ್ಪಾದಕರು ಎಂದು ಹೇಳುವ ಮೂಲಕ ಕಂಗನಾ ಸದ್ಯ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕಂಗನಾರ ಈ ಹೇಳಿಕೆಯನ್ನು ಸಿಖ್​ ಸಮುದಾಯ ತೀವ್ರವಾಗಿ ಖಂಡಿಸಿದೆ.

ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಕಂಗನಾರ ಭವಿಷ್ಯದ ಸಾಮಾಜಿಕ ಮಾಧ್ಯಮಗಳ ಪೋಸ್ಟ್​​ಗಳ ಮೇಲೆ ಸೆನ್ಸಾರ್​ಶಿಪ್​ ಹೇರುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದ ಸಂಬಂಧದ ಸುದ್ದಿ ವರದಿಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ ‘ಹಾಹಾ..! ನಾನು ಈ ದೇಶದ ಅತ್ಯಂತ ಶಕ್ತಿ ಶಾಲಿ ಮಹಿಳೆ’..! ಎಂದು ಬರೆದುಕೊಂಡಿದ್ದಾರೆ.

ವಕೀಲ ಚರಂಜೀತ್​ ಸಿಂಗ್​ ಚಂದ್ರಪಾಲ್,​​ ಕಂಗನಾ ರಣಾವತ್​ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳನ್ನು ಮುಂಬೈನ ಖಾರ್​ ಪೊಲೀಸ್​ ಠಾಣೆಗೆ ವರ್ಗಾಯಿಸುವಂತೆ ಕೋರಿದ್ದಾರೆ. ಅಲ್ಲದೇ ಆರು ತಿಂಗಳೊಳಗಾಗಿ ದೋಷಾರೋಪ ಪಟ್ಟಿ ಹಾಗೂ 2 ವರ್ಷದೊಳಗಾಗಿ ತ್ವರಿತ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...