alex Certify ʼವಿಕ್ರಮ್‌ʼ ಯಶಸ್ಸಿನ ಬೆನ್ನಲ್ಲೇ ಕಮಲ್‌ ಹಾಸನ್‌ ರಿಂದ ನಿರ್ದೇಶಕರಿಗೆ ದುಬಾರಿ ಗಿಫ್ಟ್;‌ 13 ಸಹಾಯಕ ನಿರ್ದೇಶಕರಿಗೂ ಹೊಚ್ಚ ಹೊಸ ಬೈಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಕ್ರಮ್‌ʼ ಯಶಸ್ಸಿನ ಬೆನ್ನಲ್ಲೇ ಕಮಲ್‌ ಹಾಸನ್‌ ರಿಂದ ನಿರ್ದೇಶಕರಿಗೆ ದುಬಾರಿ ಗಿಫ್ಟ್;‌ 13 ಸಹಾಯಕ ನಿರ್ದೇಶಕರಿಗೂ ಹೊಚ್ಚ ಹೊಸ ಬೈಕ್

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೊಂಡ ಕೇವಲ ನಾಲ್ಕು ದಿನಗಳಲ್ಲೇ ಈ ಚಿತ್ರ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ಕಮಲ್‌ ಹಾಸನ್‌ ʼವಿಕ್ರಮ್‌ʼ ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರಿಗೆ ಅಚ್ಚರಿಯ ಗಿಫ್ಟ್‌ ನೀಡಿದ್ದಾರೆ. ಮಾತ್ರವಲ್ಲ ಚಿತ್ರದ ಯಶಸ್ಸಿಗೆ ಶ್ರಮಿಸಿದ 13 ಮಂದಿ ಸಹಾಯಕ ನಿರ್ದೇಶಕರಿಗೂ ಗಿಫ್ಟ್‌ ಸಿಕ್ಕಿದೆ.

ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರಿಗೆ ಲೆಕ್ಸಾಸ್‌ ಕಾರನ್ನು ಕಮಲ್‌ ಹಾಸನ್‌ ಗಿಫ್ಟ್‌ ಆಗಿ ನೀಡಿದ್ದು, ಇನ್ನು 13 ಮಂದಿ ಸಹಾಯಕ ನಿರ್ದೇಶಕರಿಗೆ ಒಂದು ಲಕ್ಷ ರೂ. ಮೌಲ್ಯದ ಹೊಚ್ಚ ಹೊಸ Apache RTR 160 ಬೈಕ್‌ ಗಿಫ್ಟ್‌ ಆಗಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...