alex Certify 35 ವರ್ಷಗಳ ಬಳಿಕ ಮತ್ತೆ ಒಂದುಗೂಡುತ್ತಿದ್ದಾರೆ ಕಮಲ ಹಾಸನ್ – ಮಣಿರತ್ನಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷಗಳ ಬಳಿಕ ಮತ್ತೆ ಒಂದುಗೂಡುತ್ತಿದ್ದಾರೆ ಕಮಲ ಹಾಸನ್ – ಮಣಿರತ್ನಂ…!

ನಟ ಕಮಲಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ಈ ಹಿಂದೆ ಹಲವು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ. ಈ ಇಬ್ಬರು ಖ್ಯಾತನಾಮರು ಒಟ್ಟಿಗೆ ಸೇರಿ ಮಾಡಿದ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಈಗ ಬರೋಬ್ಬರಿ 35 ವರ್ಷಗಳ ಬಳಿಕ ಇಬ್ಬರು ದಿಗ್ಗಜರು ಮತ್ತೆ ಒಂದುಗೂಡಿದ್ದಾರೆ.

ಹೌದು, ಕಮಲ್ ಹಾಸನ್ ನಾಯಕ ನಟನಾಗಲಿರುವ ಚಿತ್ರವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಇದಕ್ಕೆ ಈಗಾಗಲೇ KH234 ಎಂಬ ಟೈಟಲ್ ನೀಡಲಾಗಿದೆ. ಸ್ವತಃ ಕಮಲಹಾಸನ್ ಸಾಮಾಜಿಕ ಮಾಧ್ಯಮ ಟ್ವಿಟರ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಕಮಲಹಾಸನ್ ನಟಿಸಿ ಬಿಡುಗಡೆಯಾದ ‘ವಿಕ್ರಮ್’ ಭರ್ಜರಿ ಯಶಸ್ಸು ಸಾಧಿಸಿದ್ದು, ಇದಾದ ಬಳಿಕ ಪ. ರಂಜಿತ್ ನಿರ್ದೇಶನದಲ್ಲಿ ಕಮಲ್ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಮಣಿರತ್ನಂ, ಕಮಲಹಾಸವನ್ನು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈ ಜೋಡಿಯ ಚಿತ್ರವನ್ನು ಕಲಾನಿಧಿ ಸ್ಟಾಲಿನ್ ಅವರ ರೆಡ್ ಜಾಯಿಂಟ್ ಮೂವೀಸ್, ಕಮಲ ಹಾಸನ್ ಅವರ ರಾಜಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಮತ್ತು ಮಣಿರತ್ನಂ ಅವರ ಮದ್ರಾಸ್ ಟಾಕೀಸ್ ಒಟ್ಟಾಗಿ ನಿರ್ಮಿಸಲಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. ಈ ಚಿತ್ರ 2024ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...