ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿಯಿಂದ ಪ್ರಾಣ ಕಳೆದುಕೊಳ್ಳುವ ದುರಂತಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಇಂತಹ ಪ್ರಕರಣ ಮರುಕಳಿಸುತ್ತಲೇ ಇರುತ್ತವೆ.
ಇದೇ ರೀತಿ ಥಾಣೆ ಜಿಲ್ಲೆಯ ಡೊಂಬಿವಲಿ – ಕಲ್ಯಾಣ ಪ್ರದೇಶದಲ್ಲಿ ಮೋಟಾರ್ ಸೈಕಲ್ ಗುಂಡಿಗೆ ಬಿದ್ದಿದ್ದು, ಇದೇ ವೇಳೆ ಬಂದ ಬಸ್ ನಡಿ ಸಿಲುಕಿ ಸವಾರ ಅಂಕಿತ್ ಥೈವಾ (26) ಸಾವನ್ನಪ್ಪಿದ್ದಾರೆ.
ಅಂಬರನಾಥ್ ನಿವಾಸಿ ಅಂಕಿತ್ ಥೈವಾ ನವಿ ಮುಂಬೈನ ಘನ್ಸೋಲಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಖೋನಿ ಗ್ರಾಮದ ಕಟೈ- ಬದ್ಲಾಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ತನ್ನ ಮೋಟಾರು ಸೈಕಲ್ ಗುಂಡಿಗೆ ಇಳಿದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ನಂತರ ದ್ವಿಚಕ್ರ ವಾಹನ ಮುನ್ಸಿಪಲ್ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ.
ವಾಜಪೇಯಿ – ಅಡ್ವಾಣಿ ಅವರ ಕಾಲದ ಬಿಜೆಪಿ ಸತ್ತಿದೆ..! ಮೋದಿ ವಿರುದ್ದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಪರೋಕ್ಷ ವಾಗ್ದಾಳಿ
ಥಾಣೆಯಲ್ಲಿ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸುವಂತೆ ಸಿಎಂ ಏಕನಾಥ್ ಶಿಂಧೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಮೃತ ವ್ಯಕ್ತಿಯ ತಂದೆ ನೀಡಿದ ದೂರಿನ ಮೇರೆಗೆ ಬಸ್ ಚಾಲಕನ ಮೇಲೆ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡೊಂಬಿವಿಲಿಯ ಶಾಸ್ತ್ರಿನಗರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ತಿಂಗಳ ಆರಂಭದಲ್ಲಿ ಕಲ್ಯಾಣ್‌ನ ಇಬ್ಬರು ಹಿರಿಯ ನಾಗರಿಕರು ಗುಂಡಿಯಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು.