alex Certify BIG NEWS: ಕಲಬುರಗಿ-ಬೀದರ್ ಪ್ಯಾಸೇಂಜರ್ ರೈಲಿನ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು : ಆಶಾ ಕಾರ್ಯಕರ್ತೆಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲಬುರಗಿ-ಬೀದರ್ ಪ್ಯಾಸೇಂಜರ್ ರೈಲಿನ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು : ಆಶಾ ಕಾರ್ಯಕರ್ತೆಗೆ ಗಾಯ

ಕಲಬುರಗಿ: ಪ್ಯಾಸೇಂಜರ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ಕಲಬುರ್ಗಿಯ ಸುಲ್ತಾನಪುರ ರೈಲು ನಿಲ್ದಾಣದ ಬಳಿ ನಡೆದಿದೆ.

ಚಲಿಸುತ್ತಿದ್ದ ಕಲಬುರ್ಗಿ-ಬೀದರ್ ಪ್ಯಾಸೇಂಜರ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯಗಳಾಗಿವೆ. ಗಾಯಾಳುವನ್ನು ಸುಮಿತ್ರಾ ಎಂದು ಗುರುತಿಸಲಾಗಿದ್ದು, ಆಶಾ ಕಾರ್ಯಕರ್ತೆಯಾಗಿ ಕಾರನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳು ಮಹಿಳೆಗೆ ರೈಲಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ನಿನೆಯಷ್ಟೇ ರಾಮನಗರದ ವಡೇರಹಳ್ಲಿ ಬಳಿ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೇ ಈಗ ಕಲಬುರ್ಗಿ-ಬೀದರ್ ಪ್ಯಾಸೇಂಜರ್ ರೈಲಿನ ಮೇಲೆ ಕಲ್ಲುತೂರಾಟ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...