alex Certify ಕಲಬುರಗಿ: ಬೆಳ್ಳಂಬೆಳಗ್ಗೆ ಮತ್ತೆ ಕಂಪಿಸಿದ ಭೂಮಿ, ಜನರಲ್ಲಿ ಹೆಚ್ಚಿದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಬುರಗಿ: ಬೆಳ್ಳಂಬೆಳಗ್ಗೆ ಮತ್ತೆ ಕಂಪಿಸಿದ ಭೂಮಿ, ಜನರಲ್ಲಿ ಹೆಚ್ಚಿದ ಆತಂಕ

ಕಲಬುರಗಿ: ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಚಿಂಚೋಳಿ, ಕಾಳಗಿ ತಾಲೂಕಿನ ಹಲಚೆರಾ, ಗಡಿಕೇಶ್ವರ, ರಾಜಾಪುರ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಮನೆಯಿಂದ ಹೊರಬಂದ ಜನ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಎರಡು ದಿನದಿಂದ ಇದೇ ರೀತಿ ಭೂಮಿ ಕಂಪಿಸುತ್ತಿದೆ ಗ್ರಾಮಸ್ಥರು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ನಿನ್ನೆಯಷ್ಟೇ ಬೆಳಗ್ಗೆ 5.40 ರ ಸುಮಾರಿಗೆ ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಕಂಪನದಿಂದ ಆತಂಕಗೊಂಡ ಜನ ಮನೆಯಿಂದ ಹೊರಗೆ ಓಡಿಬಂದಿದ್ದರು. ಗಡಿಕೇಶ್ವರ ಗ್ರಾಮದಲ್ಲಿ ಮೂರು ದಿನಗಳಿಂದ ಕಂಪನದ ಅನುಭವವಾಗಿದೆ.  ಪದೇ ಪದೇ ಕಂಪನದಿಂದ ಜನರಲ್ಲಿ ಆತಂಕ ಮೂಡಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...