alex Certify ಶಾರೂಕ್ ಕುರಿತು ಕಾಜೋಲ್​​ ನೀಡಿದ ಪ್ರತಿಕ್ರಿಯೆಗೆ ನೆಟ್ಟಿಗರು ಗರಂ….! ಅಷ್ಟಕ್ಕೂ ಹೇಳಿದ್ದೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಕ್ ಕುರಿತು ಕಾಜೋಲ್​​ ನೀಡಿದ ಪ್ರತಿಕ್ರಿಯೆಗೆ ನೆಟ್ಟಿಗರು ಗರಂ….! ಅಷ್ಟಕ್ಕೂ ಹೇಳಿದ್ದೇನು ಗೊತ್ತಾ ?

ಬಾಲಿವುಡ್​ ನಟಿ ಕಾಜೋಲ್​ ಡಿಸ್ನಿ + ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮ್​ ಆಗುತ್ತಿರುವ ತಮ್ಮ ಇತ್ತೀಚಿನ ವೆಬ್​ ಸಿರೀಸ್​​ ʼದಿ ಟ್ರಯಲ್ʼ ​​ಗಾಗಿ ಸುದ್ದಿಯಲ್ಲಿದ್ದಾರೆ. ಒಟಿಟಿ ವೇದಿಕೆಯಲ್ಲಿ ಮಿಂಚಲು ತಯಾರಾಗಿರುವ ಕಾಜೋಲ್​​ ಸದ್ಯ ಬ್ಯಾಕ್​ ಟು ಬ್ಯಾಕ್​ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಆಗಿದ್ದಾರೆ.

ತಮ್ಮ ನೇರ ಮಾತುಗಳ ಮೂಲಕವೇ ಹೆಚ್ಚು ಇಷ್ಟವಾಗುವ ಕಾಜೋಲ್​ ಇತ್ತೀಚೆಗೆ ʼಪಠಾಣ್​ʼ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಮಾತನಾಡುವ ಭರದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.

ಕಾಜೋಲ್ ಹಾಗೂ ಶಾರೂಕ್​ಖಾನ್​ ಆನ್​​ಸ್ಕ್ರೀನ್​​ನಲ್ಲಿ ಒಳ್ಳೆಯ ಕೆಮಿಸ್ಟ್ರಿ ಹೊಂದಿದ್ದು ಫಾರೆವರ್​ ಫೇಮಸ್​ ಜೋಡಿ ಎನಿಸಿದ್ದಾರೆ. ಆನ್​ಸ್ಕ್ರೀನ್​ ಹೊರತುಪಡಿಸಿ ಇವರಿಬ್ಬರೂ ಆಫ್​ಸ್ಕ್ರೀನ್​​ನಲ್ಲಿಯೂ ಉತ್ತಮ ಸ್ನೇಹಿತರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೂ ಸ್ನೇಹಿತನ ಸಿನಿಮಾದ ಬಗ್ಗೆ ತಮಾಷೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಾಜೋಲ್​​ಗೆ ಶಾರೂಕ್​ ಖಾನ್​​ ಬಗ್ಗೆ ಏನು ಹೇಳೋಕೆ ಇಚ್ಛಿಸುತ್ತೀರಿ…? ಎಂದು ಕೇಳಿದಾಗ ಜೋರಾಗಿ ನಕ್ಕ ಕಾಜೋಲ್,​​ ಪಠಾಣ್​ ಸಿನಿಮಾ ನಿಜಕ್ಕೂ ಎಷ್ಟು ಕಲೆಕ್ಷನ್​​​ ಗಳಿಸುತ್ತಿದೆ..? ಎಂದು ಕೇಳುತ್ತೇನೆ ಎಂದಿದ್ದಾರೆ. ಸ್ನೇಹಿತನ ಯಶಸ್ಸನ್ನೇ ಆಡಿಕೊಂಡ ಕಾಜೋಲ್​​ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

— Harminder 🍿🎬🏏 (@Harmindarboxoff) July 16, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...