alex Certify ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ

ವಿಜಯನಗರ (ಅರುಣಾಚಲ ಪ್ರದೇಶ): ಭಾರತದ ಈಶಾನ್ಯ ರಾಜ್ಯಗಳು ಎಂದರೇನೆ ಅವು ಸಾಂಸ್ಕೃತಿಕ ಪರಂಪರೆಯ ತಾಣ. ಹಸಿರುಡುಗೆ ತೊಟ್ಟು ಕಂಗೊಳಿಸುವ ರಮಣೀಯ ಸ್ಥಳಗಳ ತಾಣವಾಗಿವೆ ಈ ರಾಜ್ಯಗಳು. ಆದರೆ ದುರದೃಷ್ಟಕರ ಸಂಗತಿ ಎಂದರೆ, ಈ ಭಾಗದಲ್ಲಿನ ಹೆಚ್ಚಿನ ಸ್ಥಳಗಳಿಗೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣದಿಂದ, ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದರಿಂದ ಪ್ರವಾಸಿಗರು ವಂಚಿತರಾಗುತ್ತಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದ ಮಹಿಮೆಯಿಂದಾಗಿ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇಂದು ಹಲವರಿಗೆ ಅವಕಾಶ ಸಿಕ್ಕಂತಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಈ ಗುಪ್ತ ರತ್ನಗಳು ಜನರ ಬಳಿ ತಲುಪುತ್ತಿವೆ ಎನ್ನುವುದೇ ನೆಮ್ಮದಿಯ ವಿಷಯ.

ಇಂಥದ್ದೊಂದು ಪ್ರಕೃತಿಯ ಸೊಬಗನ್ನು ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲಾಧಿಕಾರಿ ಸನ್ನಿ ಕೆ. ಸಿಂಗ್ ಸೆರೆಹಿಡಿದು ಅದನ್ನು ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ತಾವು ಕೆಲಸ ನಿರ್ವಹಿಸುತ್ತಿರುವ ಸ್ಥಳದ ಸುತ್ತಲಿನ ಅದ್ಭುತ ದೃಶ್ಯವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಎರಡು ನಿಮಿಷಗಳ ಈ ವಿಡಿಯೋದಲ್ಲಿ ಸೊಂಪಾದ ಆಲ್ಪೈನ್ ಹುಲ್ಲುಗಾವಲು, ವರ್ಣರಂಜಿತ ಆರ್ಕಿಡ್ ಹಾದಿಗಳು, ನಾಮದಾಫ್​ ರಾಷ್ಟ್ರೀಯ ಉದ್ಯಾನವನದ ಶ್ರೀಮಂತ ಜೀವವೈವಿಧ್ಯ ಮತ್ತು ವಿಜಯನಗರದ ಸೌಂದರ್ಯವನ್ನು ಚಿತ್ರಿಸಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಹಿಮಾಚಲ ಪ್ರದೇಶದ ಕುರಿತು ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಚಾಂಗ್ಲಾಂಗ್ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು, ಇಲ್ಲಿ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಲು ಈ ವಿಡಿಯೋ ಸಹಕಾರಿಯಾಗಬಲ್ಲುದು. ಇಂಥ ಸ್ವರ್ಗವನ್ನು ನೋಡಲು ಜನರಿಗೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...