alex Certify ಪೇಮೆಂಟ್ ಅಪ್ಲಿಕೇಶನ್‌ ಬಳಕೆ ಕುರಿತಂತೆ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಮೆಂಟ್ ಅಪ್ಲಿಕೇಶನ್‌ ಬಳಕೆ ಕುರಿತಂತೆ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಭಾರತೀಯರು ಸ್ಮಾರ್ಟ್‌ಫೋನ್ ಬಳಸುವ ಸರಾಸರಿ ಅವಧಿಯಲ್ಲಿ 50%ನಷ್ಟು ಏರಿಕೆಯಾಗಿ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ವಿಪರೀತ ಏರಿಕೆ ಕಂಡಿದ್ದರೂ ಸಹ ಸ್ಮಾರ್ಟ್‌ಫೋನ್ ಆಧರಿತ ಆನ್ಲೈನ್ ಪಾವತಿಯಲ್ಲಿ ಮಹಿಳೆಯರ ಪಾಲು ತೀರಾ ಕಡಿಮೆ ಇರುವುದಾಗಿ ವರದಿಯೊಂದು ತಿಳಿಸಿದೆ.

ದೇಶದಲ್ಲಿ ಕೇವಲ 11.3%ನಷ್ಟು ಮಹಿಳೆಯರು ಮಾತ್ರ ಪೇಮೆಂಟ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ ಹಾಗೂ 6.1%ನಷ್ಟು ಮಹಿಳೆಯರು ಮಾತ್ರ ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಕೃತಕ ಬುದ್ಧಿಮತ್ತೆ ಆಧರಿತ ಆವಿಷ್ಕಾರೀ ಸ್ಟಾರ್ಟ್-ಅಪ್‌ ಬಾಬಲ್ ಎಐ ನಡೆಸಿದ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.

ಇದೇ ವೇಳೆ, ಫುಡ್‌ ಡೆಲಿವರಿ ಅಪ್ಲಿಕೇಶನ್‌ಗಳ ಬಳಕೆಯ ವಿಚಾರದಲ್ಲಿ 23.1% ಮಹಿಳೆಯರು ಆಸಕ್ತರಾಗಿದ್ದು, ಸಂಪರ್ಕದ ಅಪ್ಲಿಕೇಶನ್‌ಗಳು (23.3%), ವಿಡಿಯೋ ಅಪ್ಲಿಕೇಶನ್‌ಗಳು (21.7%) ಸಹ ಮಹಿಳೆಯರ ಭಾಗೀದಾರಿಕೆ ವಿಚಾರದಲ್ಲಿ ಪೇಮೆಂಟ್ ಹಾಗೂ ಗೇಮ್ ಅಪ್ಲಿಕೇಶನ್‌ಗಳಿಗಿಂತ ಮುಂದಿವೆ.

ಸ್ಮಾರ್ಟ್‌ಫೋನ್ ಬಳಕೆ ಸುತ್ತಲೂ ಇರುವ ಟ್ರೆಂಡ್‌ಗಳು ಹಾಗೂ ಮಾರುಕಟ್ಟೆಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರಂಗಳೊಂದಿಗೆ ಜನರು ಹೇಗೆ ಸಂಪರ್ಕಿತರಾಗಿದ್ದಾರೆ ಎಂದು ತಿಳಿಯಲು ಬಾಬಲ್ ಎಐ ಈ ಅಧ್ಯಯನ ನಡೆಸಿದೆ.

2022 ಹಾಗೂ 2023ರ ಅವಧಿಯಲ್ಲಿ 8.5 ಕೋಟಿಗೂ ಅಧಿಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಆದ್ಯತೆಗಳನ್ನು ಬಾಬಲ್ ಎಐ ವಿಶ್ಲೇಷಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...