alex Certify ಮಹಾರಾಷ್ಟ್ರ ಹೈಡ್ರಾಮಾ; ಕಾರಿನಿಂದ ಎಸ್ಕೇಪ್ ‌ಆಗಿ ಟ್ರಕ್‌ನಲ್ಲಿ ಲಿಫ್ಟ್ ಪಡೆದು 4 ಕಿಮೀ ನಡೆದ ಶಾಸಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ಹೈಡ್ರಾಮಾ; ಕಾರಿನಿಂದ ಎಸ್ಕೇಪ್ ‌ಆಗಿ ಟ್ರಕ್‌ನಲ್ಲಿ ಲಿಫ್ಟ್ ಪಡೆದು 4 ಕಿಮೀ ನಡೆದ ಶಾಸಕ….!

ಮಹಾರಾಷ್ಟ್ರ ರಾಜಕೀಯ ರೋಚಕ ಘಟ್ಟ ತಲುಪಿದ್ದು, ಒಂದು ಚಲನಚಿತ್ರಕ್ಕಾಗುವಷ್ಟು ಸರಕು ಕೂಡ ಇದೆ.

ಶಿವಸೇನಾ, ಕಾಂಗ್ರೆಸ್ ನೇತೃತ್ವದ ಅಘಾಡಿ ಸರ್ಕಾರ ಅಲುಗಾಡುತ್ತಿದ್ದು, ಶಿವಸೇನೆಯಲ್ಲಿ ಮಹಾ ಬಿರುಕು ಉಂಟಾಗಿದೆ. ಈ ನಡುವೆ ಬಂಡಾಯಗಾರರ ಜತೆ ಗುರುತಿಸಿಕೊಂಡಿದ್ದ ಶಾಸಕರೊಬ್ಬರು ತಮ್ಮ‌ನಾಯಕನಿಗೆ ನಿಷ್ಠೆ ತೋರಿಸಲು ಸಾಹಸ ಮಾಡಿದ್ದಾರೆ.

ಏಕನಾಥ್ ಶಿಂಧೆ ಜೊತೆಗಿದ್ದ ಶಾಸಕರೊಬ್ಬರು ಗುಜರಾತ್‌ನಿಂದ ಎದ್ದೆನೋ ಬಿದ್ದೆನೋ ಎಂದು ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಮರಳಿದ್ದಾರೆ.

ಶಿಂಧೆ ಅವರು ಭೇಟಿಯಾಗಲು ಬಯಸುತ್ತಾರೆ ಎಂಬ ನೆಪದಲ್ಲಿ ಗುಜರಾತ್‌ಗೆ ಕರೆದೊಯ್ಯುತ್ತಿದ್ದ ಆರು ಶಾಸಕರ ಗುಂಪಿನಲ್ಲಿ ಅವರು ಒಬ್ಬರಾಗಿದ್ದರು. ಆದರೆ, ಅವರ ಕಾರುಗಳು ವಸಾಯಿ ವಿರಾರ್ ದಾಟಿ ಗುಜರಾತ್ ಗಡಿಯ ಮುಂದೆ ಸಾಗುತ್ತಿದ್ದಂತೆ ಶಾಸಕರಿಗೆ ಅನುಮಾನ ಬಂದಿದೆ.

ಕಾರು ಚೆಕ್‌ಪಾಯಿಂಟ್ ಸಮೀಪಿಸುತ್ತಿದ್ದಂತೆ, ಆ ಶಾಸಕ ಕಾರಿನಿಂದ ಎಸ್ಕೇಪ್ ಆಗಿ, ದ್ವಿಚಕ್ರ ವಾಹನ ಸವಾರರಿಂದ ಲಿಫ್ಟ್ ತೆಗೆದುಕೊಂಡರು. ನಂತರ ಮಹಾರಾಷ್ಟ್ರದ ಕಡೆಗೆ ನಾಲ್ಕು ಕಿಲೋಮೀಟರ್ ನಡೆದು, ಮುಂಜಾನೆ ದಹಿಸರ್ ತಲುಪಲು ಟ್ರಕ್‌ನಲ್ಲಿ ಪ್ರಯಾಣ ಮಾಡಿದರು ಮತ್ತು ಮುಂಬೈಗೆ ಹಿಂದಿರುಗಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ ಧಾವಿಸಿದರು.

ಜೇಂಟ್ ಬಾಲ್ ನೊಂದಿಗೆ ಕುದುರೆ ಆಟದ ಮಸ್ತಿ….! ವಿಡಿಯೋ ವೈರಲ್

ನಂತರ ಶಾಸಕರು ತಮ್ಮ ಸಂಕಷ್ಟವನ್ನು ಉದ್ಧವ್ ಮುಂದೆ ವಿವರಿಸಿದ್ದ ಮತ್ತು ಇತರರ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಿವಸೇನಾ ಹಿರಿಯ ನಾಯಕ ಏಕನಾಥ್ ಶಿಂಧೆ ಬಂಡಾಯದಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನೊಂದಿಗೆ ಮಹಾರಾಷ್ಟ್ರ ಸರ್ಕಾರ ಅತಂತ್ರವಾಗಿದೆ. ಪಕ್ಷದ ನಡವಳಿಕೆ ಬಗ್ಗೆ ಅಸಮಾಧಾನಗೊಂಡಿರುವ ಶಿಂಧೆ, ಎಂಎಲ್‌ಸಿ ಚುನಾವಣೆಯ ನಂತರ 11 ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದು, ಈಗ ಅವರಿಗೆ ಸುಮಾರು 40 ಶಾಸಕರ ಬೆಂಬಲವಿದೆ ಎಂದು ವರದಿಯಾಗಿದೆ.

ಈ ನಡುವೆ ಮುಖ್ಯಮಂತ್ರಿ ಉದ್ಧವ್ ನಂಬರ್ ಗೇಮ್‌ನಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...