alex Certify ಲೈವ್​ ವೇಳೆಯೇ ನೊಣ ನುಂಗಿದ ಆಂಕರ್​, ಮುಂದೇನಾಯ್ತು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್​ ವೇಳೆಯೇ ನೊಣ ನುಂಗಿದ ಆಂಕರ್​, ಮುಂದೇನಾಯ್ತು…..?

ನ್ಯೂಸ್​ ಚಾನಲ್​ ಆ್ಯಂಕರ್​ ಲೈವ್​ ನ್ಯೂಸ್​ ಕೊಡುತ್ತಿದ್ದಾಗ ನೊಣ ನುಂಗಿ ಸುದ್ದಿಯಾಗಿದ್ದಾರೆ.
ಪತ್ರಕರ್ತೆ ಫರಾ ನಾಸರ್​ ನ್ಯೂಸ್​ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದ್ದಿದ್ದು, ಬಾಯಿಯೊಳಗೂ ದಾಟಿತು. ಆಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದನ್ನು ನುಂಗಿ ಸುದ್ದಿ ಓದುವುದನ್ನು ಮುಂದುವರಿಸಿದ್ದಾರೆ.

ಫರಾ ಅದನ್ನು ಹಾಸ್ಯವಾಗಿ ತೆಗೆದುಕೊಂಡು ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ತನ್ನ ನೇರ ಪ್ರಸಾರದ ಕ್ಲಿಪ್​ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಒಂದು ಲಕ್ಷ ವೀಕ್ಷಣೆ ಕಂಡಿದೆ.

ಪಾಕಿಸ್ತಾನದಲ್ಲಿ ಮಳೆಯು ಹೇಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ನಾಸರ್​ ವರದಿ ಮಾಡುತ್ತಿದ್ದಾಗ ಅವಳ ಬಾಯಿಯತ್ತ ನೊಣ ಬಂದಿದೆ. ಪಾಕಿಸ್ತಾನವು ಈ ರೀತಿಯ ಮಾನ್ಸೂನ್​ ಹಾವಳಿ ನೋಡಿಲ್ಲ. ಎಂಟು ವಾರಗಳು ನಿಲ್ಲದ ಧಾರಾಕಾರ ಮಳೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪಾಕಿಸ್ತಾನದ ಬಗ್ಗೆ ವರದಿ ಮಾಡುವಾಗ ಬಾಯಿಯೊಳಗೆ ನೊಣ ಹಾರಿತು. ಅನಿವಾರ್ಯವಾಗಿ ಆಕೆ ನುಂಗಲೇ ಬೇಕಾಯಿತು.

ಆ ಸಂದರ್ಭದಲ್ಲಿ ಆಕೆ ತನ್ನ ವೀಕ್ಷಕರಿಗೆ ಏನಾಯಿತು ಎಂಬುದನ್ನು ತಿಳಿಸಲಿಲ್ಲ ಮತ್ತು ತನ್ನ ಕೆಲಸ ಮುಂದುವರಿಸಿದರು.
ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಆಕೆಯ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...