alex Certify ತಲೆತಿರುಗಿಸುತ್ತೆ ‌ʼಹೃದಯಾಘಾತʼದ ಬಗ್ಗೆ ನಟ ಜಾನ್​ ಅಬ್ರಹಾಂ ನೀಡಿದ ವಿವರಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆತಿರುಗಿಸುತ್ತೆ ‌ʼಹೃದಯಾಘಾತʼದ ಬಗ್ಗೆ ನಟ ಜಾನ್​ ಅಬ್ರಹಾಂ ನೀಡಿದ ವಿವರಣೆ..!

John Abraham's bizarre explanation of what causes a heart attack is now a viral  video. Not impressed, says Internet - Trending News Newsಬಾಲಿವುಡ್​ ನಟ ಜಾನ್​ ಅಬ್ರಹಾಂ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಬಿ ಟೌನ್​ ಫಿಟ್​​​ ಸೆಲೆಬ್ರಿಟಿಗಳಲ್ಲಿ ಜಾನ್​ ಅಬ್ರಾಹಂ ಕೂಡ ಒಬ್ಬರು. ಜಿಮ್​​ನಲ್ಲಿ ಕಸರತ್ತು ನಡೆಸಿದ ಜಾನ್​ ಅಬ್ರಾಹಂ ಅನೇಕ ವರ್ಷಗಳಿಂದ ತಮ್ಮ ಶರೀರವನ್ನು ಕಟ್ಟು ಮಸ್ತಾಗಿ ಇಟ್ಟುಕೊಂಡಿದ್ದಾರೆ.

ಜಾನ್​ ಅಬ್ರಹಾಂ ಫಿಟ್​ನೆಸ್​ ಫ್ರೀಕ್​ ಅನ್ನೋದು ಅವರ ಶರೀರವನ್ನು ನೋಡಿದ ತಕ್ಷಣವೇ ಯಾರು ಬೇಕಾದರೂ ಅಂದಾಜಿಸಬಹುದಾದ ವಿಚಾರ. ಆದರೆ ಅವರ ಸಾಮಾನ್ಯ ಜ್ಞಾನ ಎಷ್ಟಿದೆ ಅನ್ನೋದು ಟ್ವಿಟರ್​ನಲ್ಲಿ ಸದ್ಯ ವೈರಲ್​ ಆಗುತ್ತಿರುವ ವಿಡಿಯೋವೊಂದರ ಮೂಲಕ ಜನರಿಗೆ ತಿಳಿದಂತೆ ಕಾಣುತ್ತಿದೆ.

ಉತ್ತಮ ಆಹಾರ ಕ್ರಮ, ಕಸರತ್ತುಗಳು ಹಾಗೂ ದೇಹದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಜಾನ್​ ಅಬ್ರಹಾಂಗೆ ತಿಳಿದಿದೆ ಎಂದು ನೀವೆಲ್ಲ ಎಂದುಕೊಂಡಿದ್ದೀರಾ. ಆದರೆ ಕಪಿಲ್​ ಶರ್ಮಾರ ಕಾರ್ಯಕ್ರಮವೊಂದರಲ್ಲಿ ಜಯತೆ 2 ಸಿನಿಮಾ ಪ್ರಮೋಷನ್​ಗಾಗಿ ಆಗಮಿಸಿದ್ದ ಜಾನ್​ ಅಬ್ರಹಾಂ ಹೃದಯಾಘಾತದ ಬಗ್ಗೆ ವಿವರಿಸಿದ ಪರಿ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.

ಸಿನಿಮಾದ ನಟಿ ದಿವ್ಯಾ ಖೋಸ್ಲಾ ಕುಮಾರ್​ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಜಾನ್​ ಅಬ್ರಹಾಂ ಹೃದಯಾಘಾತದ ಬಗ್ಗೆ ವಿವರಿಸುತ್ತಾರೆ. ಇದರಲ್ಲಿ ಅವರು ಒತ್ತಡ ಹಾಗೂ ಕಳಪೆ ಆಹಾರ ಕ್ರಮದಿಂದ ಹೃದಯಾಘಾತ ಸಂಭವಿಸುತ್ತೆ ಎಂದು ಹೇಳಿದ್ರು. ಟ್ರೈಗ್ಲಿಸರೈಡ್​ಗಳನ್ನು ಗುಳ್ಳೆಗಳಿಗೆ ಹೋಲಿಕೆ ಮಾಡಿದ್ದಾರೆ.
ಈ ವೈರಲ್​ ವಿಡಿಯೋಗೆ ‘ ನಮ್ಮ ಮೆಡಿಕಲ್​ ವಿದ್ಯಾರ್ಥಿಗಳಿಗೆ ಇಷ್ಟು ಆತ್ಮಸ್ಥೈರ್ಯ ಇರುತ್ತಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 1.7 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಜಾನ್​ ಅಬ್ರಹಾಂ ವಿವರಣೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿವರಣೆಯೇ ಹೃದಯಾಘಾತ ತರಿಸುವಂತಿದೆ ಎಂದು ವ್ಯಂಗ್ಯವಾಡ್ತಿದ್ದಾರೆ.

— Prerna Chettri (@prernachettri) December 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...