alex Certify ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ

ಜೋಹಾನ್ಸ್ ಬರ್ಗ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ಸ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. ಏ. 28ರಂದು ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಮೇಡಂ ಫೋಸೆಟ್ ಎಂಬವರು ಹಂಚಿಕೊಂಡಿದ್ದಾರೆ.

ತಮ್ಮ ಪ್ರೇಯಸಿಯನ್ನು ಖುಷಿಪಡಿಸಿ, ಒಪ್ಪಿಸುವ ಪ್ರಯತ್ನದ ವಿಡಿಯೋಗಳು ಸಾಕಷ್ಟು ಕಾಣಸಿಗುತ್ತವೆ. ಆದರೆ, ಈ ಬದ್ಧತೆಗೆ ಮತ್ತೊಬ್ಬರು ಸಿದ್ಧರಿಲ್ಲದಿದ್ದರೆ ಏನಾಗುತ್ತದೆ? ಸಂಭ್ರಮದ ಕ್ಷಣವು ದುರಂತವಾಗಿ ಮಾರ್ಪಡುತ್ತವೆ.

ಪ್ರೇಮವನ್ನು ನಿವೇದಿಸುವುದು ಸಂಬಂಧವೊಂದನ್ನು ಬೆಳೆಸುವುದಕ್ಕೆ ಎಷ್ಟು ಮುಖ್ಯವೆಂಬುದು ಎಲ್ಲರಿಗೂ ಗೊತ್ತಿದೆ. ನಿರಾಕರಣೆಯಿಂದಾಗಬಹುದಾದ ಮುಖಭಂಗವನ್ನು ತಪ್ಪಿಸಲು ಎಲ್ಲಿ ಮತ್ತು ಹೇಗೆ ಪ್ರಪೋಸ್ ಮಾಡಬೇಕೆಂದೂ ವಿಚಾರಿಸಬೇಕಾಗುತ್ತದೆ.

ಹೊಟ್ಟೆಕಿಚ್ಚಿನಿಂದ ಲೈಂಗಿಕ ಕಾರ್ಯಕರ್ತೆಯನ್ನು ಹತ್ಯೆಗೈದ ಬ್ಯಾಂಕ್ ಉದ್ಯೋಗಿಗೆ ಜೀವಾವಧಿ ಶಿಕ್ಷೆ

ದ. ಆಫ್ರಿಕಾದ ಜೋಹಾನ್ಸ್ ಬರ್ಗ್‌ನ ಸ್ಯಾಂಡ್‌ಟಂ ಸಿಟಿ ಮಾಲ್‌ನಲ್ಲಿರುವ ಮೆಕ್ ಡೊನಾಲ್ಡ್ಸ್ ರೆಸ್ಟಾರೆಂಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ವಿವಾಹವಾಗುವಂತೆ ಪ್ರೇಯಸಿಗೆ ಪ್ರಪೋಸ್ ಮಾಡಿದ. ಆದರೆ, ಯಾರೂ ಊಹಿಸದಂತಹ ಪರಿಣಾಮವನ್ನು ಎದುರಿಸಬೇಕಾಯಿತು. ವ್ಯಕ್ತಿಯ ಪ್ರೇಮ ನಿವೇದನೆಯಲ್ಲಿ ಈ ಮಹಿಳೆಯು ಆಸಕ್ತಳಾಗಿದ್ದಂತೆ ತೋರಲಿಲ್ಲ. ರೆಸ್ಟಾರೆಂಟ್‌ನಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಲು ತುಂಬ ಜನರು ಸರದಿಯಲ್ಲಿ ಕಾಯುತ್ತಿದ್ದರು.

ಈ ಮಹಿಳೆಯೂ ಅದೇ ಸಾಲಿನಲ್ಲಿ ನಿಂತಿದ್ದಳು. ಪ್ರಿಯಕರ ಆಕೆಯ ಬೆನ್ನ ಹಿಂದೆಯೇ ನಿಂತಿದ್ದ. ತಕ್ಷಣವೇ ಆತ ಮೊಣಕಾಲೂರಿ ಮಹಿಳೆಯ ಮುಂದೆ ಉಂಗುರವನ್ನು ಹಿಡಿದ. ಸಾಲು ನಿಂತಿದ್ದ ಜನರೆಲ್ಲ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳುವಂತೆ ಆಕೆಯನ್ನು ಪ್ರಚೋದಿಸುತ್ತಿದ್ದರು. ಆದರೆ, ಇದರಿಂದ ಸಿಟ್ಟಿಗೆದ್ದ ಆಕೆ ತನಗೆ ಪ್ರೇಮ ನಿವೇದನೆ ಮಾಡಿದ ವ್ಯಕ್ತಿಯನ್ನು ಟೀಸ್ ಮಾಡಲು ಆರಂಭಿಸಿದಳು. ‘ಜನರು ಸಾರ್ವಜನಿಕ ಸ್ಥಳಗಳಲ್ಲೇ ಏಕೆ ಪ್ರಪೋಸ್ ಮಾಡುತ್ತಾರೆ? ಇಂತಹ ಮುಜುಗರವನ್ನು ತಪ್ಪಿಸಲು ಖಾಸಗಿಯಾಗಿ ಪ್ರಪೋಸ್ ಮಾಡಿ’ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 36 ಲಕ್ಷ ಜನ ವೀಕ್ಷಿಸಿದ್ದಾರೆ, 65,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...