alex Certify ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೊರೊನಾ ಸಂಕಷ್ಟ ಶುರುವಾದಾಗಿನಿಂದ ವೈದ್ಯಲೋಕದಂತೆಯೇ ಪೊಲೀಸರು ಸಹ ಜನರನ್ನ ಸೋಂಕಿನಿಂದ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಶ್ರೀರಾಮುಲು ಮುಗಿಸಲು ಯತ್ನ, ದಿನಕ್ಕೆ 100 ಕೋಟಿ ಲೂಟಿ: ಮತ್ತೆ ಬೆಂಕಿಯುಗುಳಿದ ಯತ್ನಾಳ್ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿಕೆ

ಟ್ವಿಟರ್​ನಲ್ಲಿ ಕೇಂದ್ರ ಸಚಿವ ಡಾ.ಜೀತೇಂದ್ರ ಸಿಂಗ್​ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೋಹನ್​ ಸಿಂಗ್​ ಎಂಬ ಪೊಲೀಸ್​​ ಸಿಬ್ಬಂದಿ ಅಬ್ದುಲ್​ ಗನಿ ಎಂಬ 72 ವರ್ಷದ ವೃದ್ಧನನ್ನ ತನ್ನ ಹೆಗಲ ಮೇಲೆ ಹೊತ್ತು ಕೊರೊನಾ ಲಸಿಕಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಜಮ್ಮು & ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್​ ಸಿಬ್ಬಂದಿಯ ಕಾರ್ಯಕ್ಷಮತೆಗೆ ತಲೆ ಬಾಗಿದ್ದಾರೆ.

ಜೆಫ್‌ ಬೆಜೋಸ್ ಅಮೆಜಾನ್​ ಸಿಇಓ ಸ್ಥಾನ ತೊರೆಯಲು ಕ್ಷಣಗಣನೆ

ರೇಸಿ ಜಿಲ್ಲೆಯಲ್ಲಿ 72 ವರ್ಷದ ವೃದ್ಧನನ್ನ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಮುಂಚೂಣಿ ಸಿಬ್ಬಂದಿ ಮೋಹನ್​ ಸಿಂಗ್​​ರ ಈ ಕಾರ್ಯ ಹೆಮ್ಮೆ ಎನಿಸುವಂತಿದೆ ಎಂದು ಜೀತೇಂದ್ರ ಸಿಂಗ್​ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

— Dr Jitendra Singh (@DrJitendraSingh) July 2, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...