alex Certify ಕರೆ, ಎಸ್‌ಎಂಎಸ್ ಸೇವೆ ಸ್ಥಗಿತಗೊಂಡಿದ್ದರಿಂದ ಪರದಾಡಿದ ಜಿಯೋ ಬಳಕೆದಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೆ, ಎಸ್‌ಎಂಎಸ್ ಸೇವೆ ಸ್ಥಗಿತಗೊಂಡಿದ್ದರಿಂದ ಪರದಾಡಿದ ಜಿಯೋ ಬಳಕೆದಾರರು

Reliance Jio Calling And SMS Services Back After 3-Hour-Long Outage

ದೇಶದ ಅತ್ಯಂತ ಜನಪ್ರಿಯ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ಮಂಗಳವಾರ ಮುಂಜಾನೆ ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯ ಕಾಣಿಸಿತು.

ಅನೇಕ ಜಿಯೋ ಬಳಕೆದಾರರಿಗೆ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಹಾಗೂ ಎಸ್ಎಂಎಸ್ ಬಳಸಲು ಸಾಧ್ಯವಾಗಲಿಲ್ಲ. ನವೆಂಬರ್ 29ರಂದು ಬೆಳಿಗ್ಗೆ ಸುಮಾರು 6 ಗಂಟೆಯಿಂದ ಬಳಕೆದಾರರು ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ವರದಿ ಮಾಡಿದ್ದಾರೆ. 9 ಗಂಟೆಯವರೆಗೆ ಎಲ್ಲಾ ರೀತಿಯಲ್ಲೂ ಸಮಸ್ಯೆ ಮುಂದುವರೆದಿತ್ತು.

ಹಿಂದಿನ ಕೆಲವು ಸಂದರ್ಭಗಳಿಗಿಂತ ಈ ಬಾರಿ ಭಿನ್ನವಾಗಿತ್ತು, ಮೂರು-ಗಂಟೆಗಳ ದೀರ್ಘಾವಧಿಯ ಅಡಚಣೆಯ ವೇಳೆ ಮೊಬೈಲ್ ಡೇಟಾ ಕಾರ್ಯನಿರ್ವಹಿಸುತ್ತಿತ್ತು.

ಹೆಚ್ಚಿನ ಜಿಯೋ ಬಳಕೆದಾರರಿಗೆ ಡೇಟಾ ಬಳಕೆ ಉತ್ತಮವಾಗಿತ್ತು. ಕರೆ ಮತ್ತು ಎಸ್ಎಂಎಸ್ ಸೇವೆಗಳಿಗೆ ಮಾತ್ರ ಪರಿಣಾಮ ಬೀರಿತ್ತು.

ಬೆಳಿಗ್ಗೆಯಿಂದ ಯಾವುದೇ ವೋಲ್ಟ್ ಚಿಹ್ನೆ ಮತ್ತು ಯಾವುದೇ ಕರೆಗಳನ್ನು ಸ್ವೀಕರಿಸಲು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗೆ ಸಾಮಾನ್ಯ ಕರೆಗಳೇ ಸಮಸ್ಯೆಗಳನ್ನು ಹೊಂದಿರುವಾಗ 5ಜಿ ಸೇವೆಗಳು? ಹೇಗೆ ಎಂದು ಕೆಲವರು ಪ್ರಶ್ನೆ ಎತ್ತಿದ್ದರು.

ಒಟಿಪಿಗಳನ್ನು ಸ್ವೀಕರಿಸಲು ಸಾಧ್ಯವಾಗದೇ ವಿವಿಧ ಸೇವೆ, ವ್ಯವಹಾರಗಳಿಗೂ ಅಡಚಣೆ ಉಂಟಾಗಿ ಲಾಗಿನ್‌ ಸಮಸ್ಯೆಯಾಗಿದೆ.

ಇದು ನೂರಾರು ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ಗೊತ್ತಾಗಿದೆ. ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಿಂದ ವರದಿಗಳು ಬಂದಿವೆ.

ಜಿಯೋ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...