alex Certify 296 ರೂ. ಗೆ ಈ ಕಂಪನಿ ನೀಡ್ತಿದೆ 25 ಜಿಬಿ ಡೇಟಾ.…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

296 ರೂ. ಗೆ ಈ ಕಂಪನಿ ನೀಡ್ತಿದೆ 25 ಜಿಬಿ ಡೇಟಾ.…!

ಅಗ್ಗದ ಪ್ಲಾನ್ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ. ಆರಂಭದಿಂದಲೇ ಧಮಾಲ್ ಮಾಡ್ತ ಬಂದಿರುವ ಜಿಯೋ ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಎರಡೂ ಪ್ಲಾನ್ ಗಳನ್ನು ನೀಡ್ತಿದೆ. ಇಂದು ಜಿಯೋದ ಫ್ರೀಡಂ ಪ್ಲಾನ್ ಬಗ್ಗೆ ಮಾಹಿತಿ ನೀಡ್ತೇವೆ.

ಜಿಯೋದ ಫ್ರೀಡಂ ಪ್ಲಾನ್ ಬೆಲೆ 296 ರೂಪಾಯಿ. 30 ದಿನಗಳ ಈ ಯೋಜನೆಯಲ್ಲಿ ಯಾವುದೇ ಮಿತಿಯಿಲ್ಲದೆ 25ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಅಂದರೆ ಯಾವುದೇ ಮಿತಿಯಿಲ್ಲದೆ ನೀವು ದಿನಕ್ಕೆ ಎಷ್ಟು ಬೇಕಾದರೂ ಇಂಟರ್ನೆಟ್  ಬಳಸಬಹುದು. ಇದರಲ್ಲಿ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗ್ತಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ ಮಾಡಬಹುದಾಗಿದೆ.

ಜಿಯೋದ ಈ ಪ್ಲಾನ್ ನಲ್ಲಿ ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಪಡೆಯಬಹುದು.

ಏರ್ಟೆಲ್ ಕೂಡ 299 ರೂಪಾಯಿ ಪ್ಲಾನ್ ನೀಡ್ತಿದೆ. ಆದ್ರೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಕರೆ, ಎಸ್ಎಂಎಸ್ ಜೊತೆ ಪ್ರತಿ ದಿನ 1.5 ಜಿಬಿ ಡೇಟಾ ಲಭ್ಯವಿದೆ. ವಿಐ 299 ರೂಪಾಯಿ ಯೋಜನೆಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಸಿಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...