alex Certify ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ

ಭಾರತದಲ್ಲಿ ಟಿಕ್​ಟಾಕ್​ ಅಪ್ಲಿಕೇಶನ್ ನಿಷೇಧವಾಗಿದ್ದರೂ, ಪ್ರಪಂಚದಾದ್ಯಂತ ಜನರನ್ನು ಇದು ಆಕರ್ಷಿಸುತ್ತಿದೆ. ಇದೀಗ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಜಿಗಲ್​ ಜಿಗಲ್​ ಹಾಡು. ಟಾಪ್​ 10 ಗಳಲ್ಲಿ ಈ ಹಾಡು ಸ್ಥಾನ ಗಿಟ್ಟಿಸಿಕೊಂಡಿದೆ.

ಲೂಯಿಸ್ ಥೆರೌಕ್ಸ್ ಅವರ ರಾಪ್ ಟ್ರ್ಯಾಕ್ ಅನ್ನು ನಿರ್ಮಾಪಕರಾದ ಡ್ಯೂಕ್ ಮತ್ತು ಜೋನ್ಸ್ ಅವರು ಕ್ಲಬ್ ಗೀತೆಯಾಗಿ ರೀಮಿಕ್ಸ್ ಮಾಡಿರುವ ಗೀತೆ ಇದಾಗಿದೆ.

ಲೂಯಿಸ್ ಥೆರೌಕ್ಸ್ ಅವರ ರಾಪ್ ಹಾಡು My money don’t jiggle jiggle, it folds / I like to see you wiggle wiggle, for sure” ಇದಾಗಿದೆ. ಟಿಕ್‌ಟಾಕ್‌ನಲ್ಲಿ 2022 ರಲ್ಲಿ ಹೆಚ್ಚು ಪ್ಲೇ ಮಾಡಿದ ಹಾಡುಗಳಲ್ಲಿ ಇದನ್ನು ಒಂದಾಗಿ ಗುರುತಿಸಲಾಗಿದೆ. ಟಾಪ್​ 10ರಲ್ಲಿ ಈ ಹಾಡು 8ನೇ ಸ್ಥಾನ ಗಳಿಸಿದೆ.

ಬಿಬಿಸಿ ಪ್ರಕಾರ, ಕಿರು-ರೂಪದ ಈ ವೀಡಿಯೊ ಅಪ್ಲಿಕೇಶನ್‌ನಲ್ಲಿ ಟ್ರ್ಯಾಕ್ ಆರು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಷಕೀರಾ ಮತ್ತು ಕೊರಿಯನ್ ಗರ್ಲ್ ಬ್ಯಾಂಡ್ ಬ್ಲ್ಯಾಕ್​ಪಿಂಕ್​ನಂಥ ತಾರೆಯರೂ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಇದು ಪ್ರಪಂಚದಾದ್ಯಂತ ಅದರ ಜನಪ್ರಿಯತೆ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...