alex Certify 7 ಸೀಟರ್ jeep SUV ಕುರಿತು ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ಸೀಟರ್ jeep SUV ಕುರಿತು ಇಲ್ಲಿದೆ ಡಿಟೇಲ್ಸ್

ಜೀಪ್ ಕಂಪನಿಯು ಮೇ 19ರಂದು ಭಾರತದಲ್ಲಿ ಏಳು ಸೀಟರ್ ವಾಹನ ಬಿಡುಗಡೆಗೊಳಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ಐಕಾನಿಕ್ ಕಾರು ತಯಾರಕರೆನಿಸಿಕೊಂಡ ಜೀಪ್ ಕಂಪನಿ 2016ರಲ್ಲಿ ತಮ್ಮ ಜಾಗತಿಕವಾಗಿ ಪ್ರಸಿದ್ಧವಾದ ಉತ್ಪನ್ನ ರಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ SUVಗಳೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿತು.

ವರ್ಷದ ನಂತರ ಅವರು ಐದು ಸೀಟರ್‌ಗಳ ಜೀಪ್ ಕಂಪಾಸ್ SUVಯನ್ನು ಬಿಡುಗಡೆ ಮಾಡಿದರು, ಅದು ಜೀಪ್ ತನ್ನ ಬ್ರಾಂಡ್ ಹೆಸರನ್ನು ಭಾರತದಲ್ಲಿ ಗಟ್ಟಿಯಾಗಿ ಸ್ಥಾಪಿಸಲು ಸಹಾಯ ಮಾಡಿತು.

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ಈಗ ಐದು ವರ್ಷಗಳ ನಂತರ ಜೀಪ್ ಮೆರಿಡಿಯನ್ ಎಂಬ 7 ಆಸನಗಳ SUV ಬಿಡುಗಡೆಯೊಂದಿಗೆ ಭಾರತದಲ್ಲಿ ತಮ್ಮ ಅಧಿಪತ್ಯ ವಿಸ್ತರಿಸಲು ಕಂಪನಿ‌ ಮುಂದಾಗಿದೆ.

ಜೀಪ್ ಮೆರಿಡಿಯನ್ ಹೊಸ 7 ಸೀಟರ್ ಡಿ-ಸೆಗ್ಮೆಂಟ್ SUV ಆಗಿದ್ದು, ಪ್ರೀಮಿಯಂ ಕ್ಯಾಬಿನ್ ಜತೆಗೆ ಆಫ್ ರೋಡಿಂಗ್ ಭರವಸೆ ಕೂಡ ನೀಡುತ್ತದೆ. ಮೆರಿಡಿಯನ್ ಡಿ ಸೆಗ್ಮೆಂಟ್ SUV ಆಗಿದೆ ಮತ್ತು ಬದಲಾವಣೆಗಳು ಸಾಕಷ್ಟು ಕಾಣಿಸುತ್ತದೆ.

ಹೆಡ್‌ಲೈಟ್‌ಗಳಿಂದ ಹಿಡಿದು ಬಂಪರ್, ಅಲಾಯ್ ವಿನ್ಯಾಸ, ಬದಲಾದ ಸ್ವರೂಪದಲ್ಲಿ ಹಿಂಭಾಗ ಮತ್ತು ಒಟ್ಟಾರೆ ಆಯಾಮಗಳವರೆಗೆ ಎಲ್ಲವೂ ಹೊಸದು. ಮೆರಿಡಿಯನ್ 4,769 ಎಂಎಂ ಉದ್ದ, 1,859 ಎಂಎಂ ಅಗಲ, 1.698 ಎಂಎಂ ಎತ್ತರ ಮತ್ತು 2,782 ವ್ಹೀಲ್ ಬೇಸ್ ಹೊಂದಿದೆ. 18 ಇಂಚಿನ ಡೈಮಂಡ್ ಕಟ್ ಡ್ಯುಯಲ್ ಟೋನ್ ಅಲಾಯ್ ಹೊಂದಿದೆ. ಒಟ್ಟಾರೆಯಾಗಿ ಇದು ಅತ್ಯಂತ ಪ್ರೀಮಿಯಂ ಆಗಿ ಕಾಣುವ SUVಗಳಲ್ಲಿ ಒಂದಾಗಿದೆ.

ಹೊರಭಾಗಕ್ಕಿಂತ ಭಿನ್ನವಾಗಿ ಜೀಪ್ ಮೆರಿಡಿಯನ್‌ನ ಕ್ಯಾಬಿನ್ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಜೀಪ್ ಕಂಪಾಸ್‌ನಂತೆಯೇ ಇರುತ್ತದೆ. ಮೆರಿಡಿಯನ್‌ನಲ್ಲಿನ ದೊಡ್ಡ ಸೇರ್ಪಡೆಯೆಂದರೆ ಹೆಚ್ಚುವರಿ ಆಸನಗಳ ಸಾಲು. ಸೀಟುಗಳ ಸುಲಭ ಚಲನೆಗಾಗಿ ಮಧ್ಯದ ಸೀಟುಗಳು ಒಂದು ಟಚ್ ಡ್ರಾಪ್ ಹೊಂದಿವೆ.

ಜೀಪ್ ಮೆರಿಡಿಯನ್‌ನ ಹಿಂದಿನ ಸೀಟ್ ವಿಶಾಲವಾಗಿಲ್ಲ, 2 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಸ ಅನುಭವ ನೀಡಬಹುದು ಮತ್ತು ಇತ್ತೀಚಿನ ಯುಕನೆಕ್ಟ್ ಸಂಪರ್ಕವನ್ನು ಪಡೆಯುತ್ತದೆ. ಇದು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವೈರ್‌ಲೆಸ್ ಮತ್ತು 9 ಸ್ಪೀಕರ್ ಸೌಂಡ್ ಸೆಟಪ್ ಅನ್ನು ಹೊಂದಿರುತ್ತದೆ‌.

ಇತರ ವೈಶಿಷ್ಟ್ಯಗಳಲ್ಲಿ 360 ಡಿಗ್ರಿ ಕ್ಯಾಮೆರಾ, ಸಂಪೂರ್ಣ ಡಿಜಿಟಲ್ ಡಿಸ್ ಪ್ಲೆ, ಪನೋರಮಿಕ್ ಡ್ಯುಯಲ್ ಪೇನ್ ಸನ್‌ರೂಫ್, ಆಟೋ ಟೈಲ್ ಗೇಟ್‌ಗಳಿವೆ‌. ಸುರಕ್ಷತೆಯ ವಿಚಾರಕ್ಕದ ಬಂದರೆ ಮೆರಿಡಿಯನ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕೂಡ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...