alex Certify ಪ್ರಸಿದ್ಧ ರೆಸ್ಟೋರೆಂಟ್​ನ ನೂಡಲ್ಸ್​ನಲ್ಲಿ ಜೀವಂತ ಕಪ್ಪೆ ಕಂಡು ಹೌಹಾರಿದ ಪ್ರವಾಸಿಗ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ರೆಸ್ಟೋರೆಂಟ್​ನ ನೂಡಲ್ಸ್​ನಲ್ಲಿ ಜೀವಂತ ಕಪ್ಪೆ ಕಂಡು ಹೌಹಾರಿದ ಪ್ರವಾಸಿಗ…..!

ಜಪಾನ್​: ಜಪಾನಿನ ವ್ಯಕ್ತಿಯೊಬ್ಬರು ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ನೂಡಲ್ಸ್​ ಖರೀದಿಸಿದ್ದು ಅದೀಗ ಭಾರಿ ಸುದ್ದಿಯಾಗಿದೆ. ಅದಕ್ಕೆ ಕಾರಣ ನೂಡಲ್ಸ್​ನಲ್ಲಿ ಜೀವಂತ ಕಪ್ಪೆಯನ್ನು ಅವರು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ಅವರು ಇದರ ವಿಡಿಯೋ ಶೇರ್​ ಮಾಡಿದ್ದಾರೆ.

ಕೈಟೊ ಎಂಬ ವ್ಯಕ್ತಿ ಇದರ ವಿಡಿಯೋ ಶೇರ್​ ಮಾಡಿದ್ದಾರೆ. ನೂಡಲ್ಸ್‌ನಲ್ಲಿ ಜೀವಂತ ಕಪ್ಪೆ ನೋಡಿದ್ದುದಾಗಿ ಹೇಳಿದ್ದಾರೆ. ನೂಡಲ್ಸ್​ನ ಹೆಚ್ಚಿನ ಭಾಗವನ್ನು ತಿಂದು ಮುಗಿಸಿದಾಗ ಕಪ್ಪೆ ಕಂಡಿತು ಎಂದಿದ್ದಾರೆ.

ಗೋಧಿ ಹಿಟ್ಟಿನಿಂದ ಮಾಡಿದ ದಪ್ಪ ನೂಡಲ್ಸ್​ ಉಡಾನ್​ ಆರ್ಡರ್​ ಮಾಡಿದ್ದೆ. ಇದನ್ನು ಜಪನೀಸ್ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ನಾನು ಜಪಾನ್​ ಪ್ರವಾಸದಲ್ಲಿ ಇದ್ದಾಗ ಇದನ್ನು ಆರ್ಡರ್​ ಮಾಡಿದೆ. ಇಲ್ಲಿಯ ಪ್ರಸಿದ್ಧ ರೆಸ್ಟೋರೆಂಟ್ ಟೇಕ್‌ಅವೇಗೆ ಇದನ್ನು ತಿನ್ನಲು ಹೋಗಿದ್ದೆ. ನೂಡಲ್ಸ್​ ಬಹುತೇಕ ತಿಂದು ಮುಗಿಸಿದಾಗ ಕಪ್ಪೆ ಕಂಡಿತು. ನಂತರ ನೋಡಿದರೆ ಅದು ಚಲಿಸಲು ಪ್ರಾರಂಭಿಸಿತು ಎಂದಿದ್ದಾರೆ.

ಈ ಬಗ್ಗೆ ದೂರಿದ ನಂತರ, ರೆಸ್ಟೋರೆಂಟ್​ ಮಾಲೀಕ ಕ್ಷಮೆ ಕೋರಿದ. ರೆಸ್ಟೋರೆಂಟ್​ ಅನ್ನು ಕೇವಲ ಮೂರು ಗಂಟೆಗಳ ಕಾಲ ಮುಚ್ಚಿ ಮತ್ತೆ ಓಪನ್​ ಮಾಡಲಾಯಿತು ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...