alex Certify Viral Video | ಶಾರೂಕ್​​ ಖಾನ್ ಹಾಡಿಗೆ ಹೆಜ್ಜೆ ಹಾಕಿದ ಜಪಾನ್‌ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಶಾರೂಕ್​​ ಖಾನ್ ಹಾಡಿಗೆ ಹೆಜ್ಜೆ ಹಾಕಿದ ಜಪಾನ್‌ ಯುವಕ

ಕಾಕೇಟಕು ಎಂಬ ಜಪಾನಿನ ವ್ಯಕ್ತಿಯೊಬ್ಬರು ಬಾಲಿವುಡ್‌ನ ಮೇಲೆ ತಮಗಿರುವ ಪ್ರೀತಿಯನ್ನು ಭರ್ಜರಿ ಡ್ಯಾನ್ಸ್ ಮೂಲಕ ಬಹಿರಂಗಗೊಳಿಸಿದ್ದಾರೆ. ಶಾರುಖ್ ಖಾನ್ ಅವರು ನಟಿಸಿರುವ ಬ್ಲಾಕ್‌ಬಸ್ಟರ್ ಚಿತ್ರ ‘ಜವಾನ್’ ನ ಹಿಟ್ ಹಾಡಾದ ‘ಚಲೇಯಾ’ ಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಎಲ್ಲರ ಗಮನಸೆಳೆಯಲು ಇನ್ನೊಂದು ಮುಖ್ಯ ಕಾರಣವೇನೆಂದರೆ ಗಮನಾರ್ಹವಾದ ಐಕಾನಿಕ್ ಟೋಕಿಯೋ ಟವರ್ ಮುಂದೆ ಈ ನೃತ್ಯ ಮಾಡಿರೋದು.

ಕಾಕೆಟಕು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದು, ಅವರ ಡ್ಯಾನ್ಸ್ ಕೌಶಲ್ಯವನ್ನು ತೋರ್ಪಡಿಸಿದೆ. ಇದರ ಜೊತೆ ಬಾಲಿವುಡ್ ಮೇಲೆ ಅವರಿಗಿರುವ ಪ್ರೀತಿ ಈ ಡ್ಯಾನ್ಸ್ ವಿಡಿಯೋದ ಮೂಲಕ ತಿಳಿದು ಬಂದಿದೆ.

ವಿಡಿಯೋದಲ್ಲಿ ನೃತ್ಯ ಸಂಯೋಜನೆ ಮಾಡಿದ ಖ್ಯಾತ ನೃತ್ಯ ಸಂಯೋಜಕಿ ಫರಾ ಖಾನ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಾದ ಅನೂಷಾ ಮತ್ತು ಸೌರಭ್ ಅವರಿಗೆ ಕಾಕೆಟಕು ಧನ್ಯವಾದವನ್ನು ಸಹ ಸಲ್ಲಿಸಿದ್ದಾರೆ.

ಈ ಅದ್ಭುತ ಡ್ಯಾನ್ಸ್ ವಿಡಿಯೋ ಬಾಲಿವುಡ್ ಅಭಿಮಾನಿಗಳ ಹೃದಯ ಗೆಲ್ಲುವ ಜೊತೆ ಶಾರುಖ್‌ಖಾನ್ ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಕಾಕೆಟಕು ಅವರ ಅದ್ಬುತ ನಿರೂಪಣೆ ಕಲೆಯ ಶಕ್ತಿ ಮತ್ತು ಪ್ರಪಂಚದಾದ್ಯಂತ ಇರುವ ಸಂಸ್ಕೃತಿಗಳನ್ನು ಕನೆಕ್ಟ್ ಮಾಡುವುದಕ್ಕು ಸಾಕ್ಷಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...