ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹಿಂದೇಟು ಹಾಕುವ ಜನರಿಗೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತೆ ಮಾಡಲು ಜಪಾನ್ ಸರ್ಕಾರ ಹೊಸ ಪ್ಲಾನ್ ಒಂದನ್ನು ರೂಪಿಸಿದೆ. ವಿದೇಶದಿಂದ ಬಂದು ಕ್ವಾರಂಟೈನ್ ನಿಯಮವನ್ನು ಮುರಿದ ಮೂವರ ಹೆಸರನ್ನು ಜಪಾನ್ ಸರ್ಕಾರ ಜಗಜ್ಜಾಹಿರು ಮಾಡಿದೆ.
ಮೂವರು ಜಪಾನಿಯರು ವಿದೇಶದಿಂದ ಬಂದ ಬಳಿಕ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರೋದನ್ನ ನಿರಾಕರಿಸಿದ್ದಾರೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಹೇಳಿದೆ.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು
ಜಪಾನ್ ಸರ್ಕಾರವು ತಮ್ಮ ದೇಶದ ಪ್ರಜೆಗಳು ಸೇರಿದಂತೆ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ 2 ವಾರಗಳ ಕಾಲ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ಅವರು ಎಲ್ಲಿದ್ದಾರೆ ಎಂದು ನಿಗಾ ಇಡೋದು ಹಾಗೂ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಕಾರ್ಯವನ್ನೂ ಜಪಾನ್ ಸರ್ಕಾರ ಮಾಡುತ್ತಿದೆ.