alex Certify ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್‌ ವೈಭವಕ್ಕೆ ತಕ್ಕಂತಿದೆ ಅವರ ನಿವಾಸ; 5 ಬೆಡ್‌ರೂಮ್‌ನ ಐಷಾರಾಮಿ ಅಪಾರ್ಟ್ಮೆಂಟ್‌ ನಲ್ಲಿ ವಾಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್‌ ವೈಭವಕ್ಕೆ ತಕ್ಕಂತಿದೆ ಅವರ ನಿವಾಸ; 5 ಬೆಡ್‌ರೂಮ್‌ನ ಐಷಾರಾಮಿ ಅಪಾರ್ಟ್ಮೆಂಟ್‌ ನಲ್ಲಿ ವಾಸ…!

ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಗಮನಸೆಳೆದಿದ್ದಾರೆ. ಈವರೆಗೆ 100ಕ್ಕಿಂತ ಹೆಚ್ಚು ಸರಾಸರಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 22ರ ಹರೆಯದ ಯಶಸ್ವಿ ಜೈಸ್ವಾಲ್‌ ಕಳೆದ ವರ್ಷ ಕುಟುಂಬ ಸಮೇತ ಮುಂಬೈನ ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆಗಿದ್ದರು. ಯಶಸ್ವಿಯ ಬ್ಯಾಟಿಂಗ್‌ ವೈಭವಕ್ಕೆ ತಕ್ಕಂತೆ ಈ ಮನೆ ಕೂಡ ಅದ್ಭುತವಾಗಿದೆ.

ಯಶಸ್ವಿ ಜೈಸ್ವಾಲ್ ಸ್ಟಾರ್ ಆಗಿದ್ದು ಕಠಿಣ ಪರಿಶ್ರಮದಿಂದ. ಟೆಂಟ್ ಹೌಸ್‌ನಲ್ಲಿ ವಾಸಿಸುತ್ತಿದ್ದ ಯುವಕ ಟೀಮ್ ಇಂಡಿಯಾಗೆ ಪ್ರವೇಶಿಸಿದ್ದು ಈಗ ಇತಿಹಾಸ. ಸದ್ಯ ಯಶಸ್ವಿ ಜೈಸ್ವಾಲ್ ಮುಂಬೈನ ಥಾಣೆಯಲ್ಲಿ 1500 ಚದರ ಅಡಿ ವಿಸ್ತೀರ್ಣದ ಈ ಮನೆಯನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮನೆಯ ಇಂಟೀರಿಯರ್‌ ಬಹಳ ಸುಂದರವಾಗಿದೆ. ಐಷಾರಾಮಿ ಬದುಕಿಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಲಿವಿಂಗ್ ರೂಮ್ ಬಹಳ ಸ್ಟೈಲಿಶ್‌ ಹಾಗೂ ಆರಾಮದಾಯಕವಾಗಿದೆ. ಕಿಚನ್‌, ಮಾಸ್ಟರ್ ಬೆಡ್‌ರೂಮ್‌ ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿವೆ. ಮನೆಯ ಫೋಟೋಗಳನ್ನು ಖುದ್ದು ಯಶಸ್ವಿ ಹಂಚಿಕೊಂಡಿದ್ದಾರೆ.

ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಎರಡು ದ್ವಿಶತಕ ಗಳಿಸಿರೋದು ವಿಶೇಷ. ಇದುವರೆಗೆ ಅವರು 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 545 ರನ್ ಗಳಿಸಿದ್ದಾರೆ. ಒಟ್ಟಾರೆ 7 ಟೆಸ್ಟ್ ಪಂದ್ಯಗಳಲ್ಲಿ 861 ರನ್ ಗಳಿಸಿದ್ದಾರೆ. ಇದರಲ್ಲಿ 2 ದ್ವಿಶತಕ, 3 ಶತಕ ಹಾಗೂ ಅರ್ಧ ಶತಕ ಸೇರಿದೆ. 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 4 ಅರ್ಧ ಶತಕ ಮತ್ತು 1 ಶತಕದೊಂದಿಗೆ 502 ರನ್ ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...