alex Certify Shocking News: ಪ್ರಧಾನಿ ಮೋದಿ ಜಮ್ಮು ಭೇಟಿ ವಿಫಲಗೊಳಿಸಲು ನಡೆದಿತ್ತು ಆತ್ಮಹತ್ಯಾ ದಾಳಿ ಸಂಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಪ್ರಧಾನಿ ಮೋದಿ ಜಮ್ಮು ಭೇಟಿ ವಿಫಲಗೊಳಿಸಲು ನಡೆದಿತ್ತು ಆತ್ಮಹತ್ಯಾ ದಾಳಿ ಸಂಚು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಸಾಂಬಾ ರ್ಯಾಲಿಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಜಮ್ಮುವಿನ ಜನನಿಬಿಡ ಪ್ರದೇಶಗಳಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಲು ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹ್ಮದ್ ಯೋಜನೆ ರೂಪಿಸಿತ್ತು ಎಂಬುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಆರೋಪಿಯೊಬ್ಬನಿಂದ ವಶಪಡಿಸಿಕೊಂಡ ಸ್ಮಾರ್ಟ್ ಫೋನ್ ಅನ್ನು ಪರಿಶೀಲನೆ ನಡೆಸಿದಾಗ ಈ ಉದ್ದೇಶಿತ ಕುಕೃತ್ಯದ ಬಗ್ಗೆ ಮಾಹಿತಿ ಲಭಿಸಿದೆ.

ಮೂಲಗಳ ಪ್ರಕಾರ, ಆ ಫೋನ್ ನಲ್ಲಿ ಜಮ್ಮುವಿನ ಜನನಿಬಿಡ ಪ್ರದೇಶಗಳ ಛಾಯಾಚಿತ್ರಗಳು ಸ್ಟೋರ್ ಆಗಿದ್ದವು. ಸೇನಾಪಡೆಗಳು ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಈ ಸ್ಮಾರ್ಟ್ ಫೋನ್ ಅನ್ನು ನಾಶಪಡಿಸಲು ಯತ್ನಿಸಿದ್ದ.

ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ

ಈ ಹಿಂದೆ ರಘುನಾಥ ಮಂದಿರ ಮತ್ತು ಸೇನೆಯ ಸುಂಜ್ವಾನ್ ಶಿಬಿರದ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದೇ ರೀತಿಯಲ್ಲಿ ಮೋದಿಯವರ ಜಮ್ಮು ಭೇಟಿಗೆ ಮುನ್ನ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ದೊಡ್ಡ ಮಟ್ಟದಲ್ಲಿ ಸಾವು-ನೋವು ಉಂಟು ಮಾಡಿ, ಮೋದಿಯವರ ಭೇಟಿಯನ್ನು ರದ್ದಾಗುವಂತೆ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದನೆ ಸಂಘಟನೆ ಶಂಕಿತ ಉಗ್ರ ಶಫೀಕ್ ಅಹ್ಮದ್ ಶೇಕ್ ಎಂಬುವನಿಗೆ ಈ ಸ್ಮಾರ್ಟ್ ಫೋನ್ ಸೇರಿದ್ದಾಗಿದ್ದು, ಈತ ಪುಲ್ವಾಮದ ತ್ರಾಲ್ ನಿವಾಸಿಯಾಗಿದ್ದಾನೆ. ಈತ ಮತ್ತಿಬ್ಬರು ಭಯೋತ್ಪಾದಕರಿಗೆ ನೆರವಾಗುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...