alex Certify ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ

ಕೆಲಸಕ್ಕೆ ಕೆಲವೊಮ್ಮೆ ತಡವಾಗುವುದು ಅಂತಹ ದೊಡ್ಡ ವಿಷಯವೇನಲ್ಲ. ಟ್ರಾಫಿಕ್ ದಟ್ಟಣೆ, ತಡವಾದ ಬಸ್ ಅಥವಾ ಅನಿರೀಕ್ಷಿತ ಮಳೆಯಿಂದಾಗಿ ಕೆಲವೊಮ್ಮೆ ತಡವಾಗುವುದು ಸಹಜ. ಆದರೆ, ನೀವು ಎಂದಾದರೂ ಕೆಲಸ ಮಾಡಲು 7.5 ಗಂಟೆಗಳ ಕಾಲ ತಡವಾಗಿ ಬಂದಿದ್ದೀರಾ? ಇಲ್ಲದಿದ್ದಲ್ಲಿ ಈ ಸ್ಟೋರಿ ಓದಿ……

ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಲಕ್ಷಣ ಘಟನೆಯನ್ನು ಹಂಚಿಕೊಂಡಿದ್ದಾರೆ. ಅವರ ಸಹೋದ್ಯೋಗಿಯೊಬ್ಬರು 7.5 ಗಂಟೆಗಳ ತಡವಾಗಿ ಬಂದಿದ್ದರಂತೆ. ಅದು ಕೂಡ ಮಲಗಿದ್ದರಿಂದ ಇಷ್ಟು ತಡವಾಗಿ ಕಚೇರಿಗೆ ಬರಲು ಕಾರಣವಾಯಿತಂತೆ.

ತನ್ನ ಸಹೋದ್ಯೋಗಿಯು ಏಳೂವರೆ ಗಂಟೆಗಳ ತಡವಾಗಿ ಕೆಲಸಕ್ಕೆ ಬಂದಿದ್ದಾರೆ. ಕ್ಷಮಿಸಿ, ತಾನು ಮಲಗಿದ್ದರಿಂದ ತಡ ಆಗಿರುವುದು ತಿಳಿಯಲಿಲ್ಲ ಎಂದು ಹೇಳಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಸಾವಿರಾರು ಲೈಕ್‌ಗಳನ್ನು ಗಳಿಸಿದೆ ಮತ್ತು ನೆಟ್ಟಿಗರಿಂದ ನೂರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ನಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇತರರು ಕೆಲಸ ಮಾಡಲು ತಡವಾದ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರ ತಾನು ಆಫೀಸ್ ವ್ಯಾನ್‌ನಲ್ಲಿ ಮಲಗಿದ್ದರಿಂದ ಕಚೇರಿಗೆ ಹೋಗಲಾಗಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...