alex Certify ಸ್ನೇಹಿತನೊಂದಿಗೆ ಸೆಕ್ಸ್ ಗೆ ಆಮಿಷ: ಚಲಿಸುವ ಕಾರ್ ನಲ್ಲೇ ಸಾಮೂಹಿಕ ಅತ್ಯಾಚಾರ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನೊಂದಿಗೆ ಸೆಕ್ಸ್ ಗೆ ಆಮಿಷ: ಚಲಿಸುವ ಕಾರ್ ನಲ್ಲೇ ಸಾಮೂಹಿಕ ಅತ್ಯಾಚಾರ – ವಿಡಿಯೋ ವೈರಲ್

ಜೈಪುರ್: ಚಲಿಸುವ ಕಾರ್ ನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೈಪುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯನ್ನು ಪೊಲೀಸರು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಘಟನೆ ನಡೆದಿದೆ. ಮೂರು ಕಾರುಗಳಲ್ಲಿ 12 ಮಂದಿ ಅತ್ಯಾಚಾರವೆಸಗಿ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ.

ಉತ್ತರಪ್ರದೇಶ ಮೂಲದ ಯುವತಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಜಸ್ಥಾನಕ್ಕೆ ಬಂದು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಸ್ನೇಹಿತನೊಬ್ಬ ಹಣದ ಆಮಿಷವೊಡ್ಡಿ ತನ್ನ ಗೆಳೆಯನೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಹೇಳಿದ್ದಾನೆ. ಹಣ ಗಳಿಸುವ ಉದ್ದೇಶದಿಂದ ಯುವತಿ ಸ್ನೇಹಿತ ಹೇಳಿದ ಸ್ಥಳಕ್ಕೆ ಹೋದಾಗ ಆಕೆಯನ್ನು ಕಾರ್ ನಲ್ಲಿ ಎಳೆದುಕೊಂಡು ಹೋದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ.

ಕಾರ್ ಗಳನ್ನು ಬದಲಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕಳೆದ ವರ್ಷ ನಡೆದ ಘಟನೆ ವಿಡಿಯೋ ವೈರಲ್ ಆಗಿದೆ. ಬಳಿಕ ಪೊಲೀಸರು ಯುವತಿಯನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಲಾಗಿದೆ ಎಂದು ಜೈಪುರ್ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯಪಾಲ್ ಲಾಂಬಾ ತಿಳಿಸಿದ್ದಾರೆ. ವಿಡಿಯೋ ಸೈಬರ್ ತಜ್ಞರಿಗೆ ಕಳಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಲಾಗಿದೆ. ಜೈಪುರ್ ಪ್ರದೇಶದವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...