alex Certify ವಿಚ್ಛೇದಿತ ಪತ್ನಿಗೆ ನಾಣ್ಯದ ಮೂಲಕ 55,000 ರೂ. ಜೀವನಾಂಶ ಪಾವತಿಸಿದ ಪತಿರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದಿತ ಪತ್ನಿಗೆ ನಾಣ್ಯದ ಮೂಲಕ 55,000 ರೂ. ಜೀವನಾಂಶ ಪಾವತಿಸಿದ ಪತಿರಾಯ

ಜೈಪುರ್: ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶ ಪಾವತಿಸಲು ವಿಫಲನಾದ ಪತಿಗೆ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳಲ್ಲಿ 55 ಸಾವಿರ ರೂ. ಪಾವತಿಸಲು ಜೈಪುರ ಕೋರ್ಟ್ ಅನುಮತಿ ನೀಡಿದೆ.

ಮಾಸಿಕ 5,000 ರೂ.ನಂತೆ 11 ತಿಂಗಳಿನಿಂದ ಪತ್ನಿಗೆ ಜೀವನಾಂಶ ನೀಡಲು ಪತಿ ವಿಫಲನಾಗಿದ್ದ. ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಆತನ ಕುಟುಂಬದವರು 11 ಗೋಣಿ ಚೀಲಗಳಲ್ಲಿ 55,000 ರೂ. ನಾಣ್ಯಗಳನ್ನು ತುಂಬಿಕೊಂಡು ಕೋರ್ಟ್ ಗೆ ತಂದಿದ್ದಾರೆ.

ಅವರ ಮನವಿಯ ಮೇರೆಗೆ ನಾಣ್ಯಗಳನ್ನು ಆತನ ವಿಚ್ಛೇದಿತ ಪತ್ನಿಗೆ ನೀಡಲು ಕೋರ್ಟ್ ಅನುಮತಿಸಿದೆ. ಆದರೆ, ಇದಕ್ಕೆ ವಿಚ್ಛೇದಿತ ಪತ್ನಿಯ ಪರ ವಕೀಲರು ಆಕ್ಷೇಪಿಸಿ ಇದು ಮಾನಸಿಕ ಹಿಂಸೆ ಆಗಿದೆ ಎಂದು ದೂರಿದ್ದಾರೆ. ಆಗ ನ್ಯಾಯಾಲಯ ನಾಣ್ಯಗಳನ್ನು ತಲಾ ಒಂದು ಸಾವಿರ ರೂಪಾಯಿಗಳಂತೆ ಪಾಕೆಟ್ ಮಾಡಿ ನೀಡುವಂತೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...