ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನವು ಡಿಸೆಂಬರ್ 31ರಿಂದ ಜನವರಿ 2ರವರೆಗೂ ಭಕ್ತಗಣಕ್ಕೆ ಮುಚ್ಚಿರಲಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ ’ಛತ್ತೀಶಾ ನಿಜೋಗ್’ ಈ ಸಂಬಂಧ ನಿರ್ಣಯ ತೆಗೆದುಕೊಂಡಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನ ಆಡಳಿತರ ಮುಖ್ಯ ಆಡಳಿತಗಾರ ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.
ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…!
ಹೊಸ ವರ್ಷದ ದಿನದಂದು ಜನ ಜಂಗುಳಿಯಲ್ಲಿ ಆಗಬಲ್ಲ ಹೆಚ್ಚಳದಿಂದ ಕೋವಿಡ್ ವ್ಯಾಪಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.