alex Certify ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…!

Railways to introduce hostesses on premium trains on lines of flight  attendants | Latest News India - Hindustan Times

ಪ್ರೀಮಿಯಂ ರೈಲುಗಳಲ್ಲಿ ವಿಮಾನದಲ್ಲಿ ಸಿಗುವಂಥ ಸೇವೆಗಳನ್ನು ಒದಗಿಸಲು ಚಿಂತನೆ ನಡೆಸಿರುವ ಭಾರತೀಯ ರೈಲ್ವೇ, ಪ್ರಯಾಣಿಕರ ಆರೈಕೆಗಾಗಿ ಅಟೆಂಡೆಂಟ್‌ಗಳನ್ನು ಕರೆತರಲು ಮುಂದಾಗಿದೆ.

ವಿಮಾನದಲ್ಲಿರುವ ಗಗನಸಖಿಯರಂತೆ ಈ ಹಳಿಸಖಿಯರನ್ನು ವಂದೇ ಭಾರತ್‌, ಗತಿಮಾನ್, ತೇಜಸ್ ಎಕ್ಸ್‌ಪ್ರೆಸ್‌ಗಳಲ್ಲಿ ಶೀಘ್ರವೇ ತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತೀಯ ರೈಲ್ವೇಯ ಪ್ರೀಮಿಯಂ ರೈಲುಗಳಿಗೆ ಸೀಮಿತವಿರಲಿರುವ ಈ ಸಿಬ್ಬಂದಿಯಲ್ಲಿ ಪುರುಷರು ಹಾಗೂ ಮಹಿಳೆಯರು ಇರಲಿದ್ದಾರೆ. ವಿಮಾನಗಳಲ್ಲಿ ಗಗನಸಖಿಯರು ಪ್ರಯಾಣಿಕರಿಗೆ ಆಹಾರ-ಪೇಯಗಳನ್ನು ತಂದುಕೊಡುವಂತೆ ಇವರೂ ಸಹ ರೈಲು ಪ್ರಯಾಣಿಕರಿಗೆ ಸೇವೆ ನೀಡಲಿದ್ದಾರೆ.

ಹಗಲಿನ ರೈಲುಗಳಲ್ಲಿ ಮಹಿಳೆಯರು ಕೆಲಸ ಮಾಡಿದರೆ, ರಾತ್ರಿ ರೈಲುಗಳಲ್ಲಿ ಪುರುಷರು ಕೆಲಸ ಮಾಡಲಿದ್ದಾರೆ.

ದೇಶದಲ್ಲಿ ಸದ್ಯ 25 ಪ್ರೀಮಿಯಂ ರೈಲುಗಳು ಹಳಿಯ ಮೇಲೆ ಓಡುತ್ತಿವೆ — ಶತಾಬ್ದಿ ಎಕ್ಸ್‌ಪ್ರೆಸ್‌ನ 12, ಒಂದು ಗತಿಮಾನ್, ವಂದೇ ಭಾರತ್‌ನ ಎರಡು, ಒಂದು ತೇಜಸ್ ಎಕ್ಸ್‌ಪ್ರೆಸ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...