alex Certify ‘ರಂಗೀಲಾ’ ಚಿತ್ರದ ದೊಡ್ಡ ಗುಟ್ಟನ್ನು ಬಿಚ್ಚಿಟ್ಟ ಊರ್ಮಿಳಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಂಗೀಲಾ’ ಚಿತ್ರದ ದೊಡ್ಡ ಗುಟ್ಟನ್ನು ಬಿಚ್ಚಿಟ್ಟ ಊರ್ಮಿಳಾ

ನಟಿ ಊರ್ಮಿಳಾ ಮಾತೋಂಡ್ಕರ್ ಅವರ 1995 ರ ʼರಂಗೀಲಾʼ ಚಿತ್ರದ ʼತನ್ಹಾ ತನ್ಹಾ ಯಹಾನ್ ಪೆ ಜೀನಾʼ ಹಾಡು ನೆನಪಿದೆಯೇ ? ಈ ಹಾಡು ಊರ್ಮಿಳಾ ಮಾತೋಂಡ್ಕರ್ ಅವರಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಈ ಹಾಡಿನ ಚಿತ್ರೀಕರಣದ ವೇಳೆ ನಡೆದ ಆಸಕ್ತಿದಾಯಕ ವಿಚಾರವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಊರ್ಮಿಳಾ ಮಾತೋಂಡ್ಕರ್ ಇತ್ತೀಚೆಗೆ ಜೀ ಕಾಮಿಡಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಹಾಡಿನ ಚಿತ್ರೀಕರಣದ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಹಾಡಿನ ಬೀಚ್ ಸೀಕ್ವೆನ್ಸ್ ಒಂದಕ್ಕೆ ಜಾಕಿ ಶ್ರಾಫ್ ಅವರ ಬನಿಯನ್ ಧರಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಹೃದಯಾಘಾತವನ್ನು ಪತ್ತೆ ಮಾಡುತ್ತೆ ಈ ವಿಶೇಷ ಸಾಧನ…..!

“ಯಾರಿಗೂ ತಿಳಿದಿಲ್ಲ, ಆದರೆ ನಾನು ರಂಗೀಲಾದಲ್ಲಿ ತನ್ಹಾ ತನ್ಹಾ ಹಾಡಿಗೆ ಜಾಕಿ ಶ್ರಾಫ್ ಅವರ ಬನಿಯನ್ ಧರಿಸಿದ್ದೆ. ನಿಜ ಹೇಳಬೇಕೆಂದರೆ ಅದರಿಂದ ನನಗೆ ಬಹಳ ಸಂತೋಷವಾಯಿತು” ಎಂದು ಹೇಳಿದ್ದಾರೆ. “ಮೊದಲಿಗೆ ನಾನು ಸ್ವಲ್ಪ ಆತಂಕಗೊಂಡಿದ್ದೆ ಮತ್ತು ದೇವರ ಕೈಯಲ್ಲಿ ಎಲ್ಲವನ್ನೂ ಬಿಟ್ಟುಬಿಟ್ಟೆ. ನಿಸ್ಸಂಶಯವಾಗಿ ಅದರಿಂದ ನನಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು” ಎಂದು ತಿಳಿಸಿದ್ದಾರೆ.

250 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ HPCL

ಕಳೆದ ವರ್ಷ ರಂಗೀಲಾ ಫಿಲ್ಮ್ 25 ವರ್ಷಗಳನ್ನು ಪೂರೈಸಿತು. ಫಿಲಂಫೇರ್ ಅವಾರ್ಡ್ಸ್ ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗವನ್ನು ಪರಿಚಯಿಸಲು ಈ ಚಿತ್ರ ಕಾರಣ ಎಂದು ಡಿಸೈನರ್ ಮನೀಶ್ ಮಲ್ಹೋತ್ರಾ ಹೇಳಿದ್ದರು.

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ ರಂಗೀಲಾ ಚಿತ್ರವು ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿದೆ. ತಾರೆಯರಾದ ಅಮೀರ್ ಖಾನ್, ಊರ್ಮಿಳಾ ಮಾತೋಂಡ್ಕರ್, ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...