alex Certify 250 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ HPCL | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

250 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ HPCL

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಮ್ ಕಾರ್ಪೋರೇಷನ್ ನಿಯಮಿತದ ಎಚ್‌ಪಿಸಿಎಲ್ ಬಯೋಫ್ಯುಯೆಲ್ಸ್‌‌ ಮ್ಯಾನೇಜ್ಮೆಂಟ್ ಹಾಗೂ ಮ್ಯಾನೇಜ್ಮೆಂಟ್‌ಯೇತರವಾದ 250ಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳನ್ನು ಕಾಂಟ್ರಾಕ್ಟ್ ಆಧಾರದ ಮೇಲೆ ಎರಡು ವರ್ಷಗಳ ಮಟ್ಟಿಗೆ ನೇಮಕ ಮಾಡಿಕೊಳ್ಳಲಾಗುವುದು. ಪ್ರದರ್ಶನ ಹಾಗೂ ಅಗತ್ಯತೆಗಳ ಆಧಾರದ ಮೇಲೆ ಕಾಂಟ್ರಾಕ್ಟ್‌ ಅನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಬಹುದು.

ಅಂಚೆ ಮೂಲಕ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್‌ 16 ಕೊನೆಯ ದಿನಾಂಕವಾಗಿದೆ.

BIG NEWS: ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ

ವಯೋಮಿತಿ:

ಮ್ಯಾನೇಜ್ಮೆಂಟ್‌ ಕ್ಷೇತ್ರದಲ್ಲಿ: 18 -57 ವರ್ಷಗಳು.

ಮ್ಯಾನೇಜ್ಮೆಂಟ್‌ಯೇತರ ಕ್ಷೇತ್ರದಲ್ಲಿ: 18 – 55 ವರ್ಷಗಳು.

ಅರ್ಜಿ ಸಲ್ಲಿಸುವುದು ಹೇಗೆ ?

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮೆ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ಎಚ್‌ಪಿಸಿಎಲ್‌ನ ಬಯೋಫ್ಯುಯೆಲ್ಸ್‌ನ ಪಟನಾ ಕಚೇರಿಗೆ ಅಕ್ಟೋಬರ್‌ 16ರ ಒಳಗೆ ಕಳುಹಿಸಬೇಕು.

ನೇಮಕಾತಿ ಪ್ರಕ್ರಿಯೆ

ಮ್ಯಾನೇಜ್ಮೆಂಟ್‌ ಹುದ್ದೆಗಳಿಗೆ: ಅರ್ಹ ಅಭ್ಯರ್ಥಿಗಳನ್ನು ಟೆಲಿಫೋನಿಕ್/ಸ್ಕೈಪ್/ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂದರ್ಶನ ತೆಗೆದುಕೊಳ್ಳಲಾಗುವುದು.

ಮ್ಯಾನೇಜ್ಮೆಂಟ್‌ಯೇತರ ಹುದ್ದೆಗಳಿಗೆ: ಅರ್ಹ ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಮಾತ್ರವೇ ಕೌಶಲ್ಯ ಪರೀಕ್ಷೆಯನ್ನು ನೋಡಿ ಪರಿಗಣಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...