alex Certify ಗರ್ಭಪಾತ ಕುರಿತ ಪ್ರಶ್ನೆಗೆ ವರದಿಗಾರನಿಗೆ ಖಡಕ್‌ ಉತ್ತರ ನೀಡಿದ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಪಾತ ಕುರಿತ ಪ್ರಶ್ನೆಗೆ ವರದಿಗಾರನಿಗೆ ಖಡಕ್‌ ಉತ್ತರ ನೀಡಿದ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ

ಟೆಕ್ಸಾಸ್​ನಲ್ಲಿರುವ ವಿವಾದಾತ್ಮಕ ಗರ್ಭಪಾತಿ ವಿರೋಧ ಕಾನೂನನ್ನು ವಿರೋಧಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ರ ನಿಲುವನ್ನು ಪ್ರಶ್ನಿಸಿದ ಪುರುಷ ವರದಿಗಾರನಿಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್​ ಸಾಕಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಜೆನ್​ ಸಾಕಿಗೆ ಮಾಧ್ಯಮಗಳು ಗರ್ಭಪಾತ ವಿರೋಧಿ ಕಾನೂನಿನ ಬಗ್ಗೆಯೇ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದನ್ನು ಕಾಣಬಹುದಾಗಿದೆ. ಓವನ್​ ಜೆನ್ಸೆನ್​ ಎಂಬ ಹೆಸರಿನ ವರದಿಗಾರನೊಬ್ಬ ಕ್ಯಾಥೋಲಿಕ್​ ಧರ್ಮಕ್ಕೆ ಸೇರಿರುವ ಬಿಡೆನ್​ ಗರ್ಭಪಾತವನ್ನು ಹೇಗೆ ಬೆಂಬಲಿಸಲು ಸಾಧ್ಯ ಎಂಬರ್ಥದಲ್ಲಿ ಪ್ರಶ್ನೆ ಕೇಳಿದ್ದರು.

ಕ್ಯಾಥೋಲಿಕ್​ ಧರ್ಮವು ಗರ್ಭಪಾತ ಮಾಡುವುದು ತಪ್ಪು ಎಂದು ಹೇಳಿದ್ದರೂ ಸಹ ಜೋ ಬಿಡೆನ್​ ಹೇಗೆ ಗರ್ಭಪಾತಕ್ಕೆ ಬೆಂಬಲ ನೀಡುತ್ತಾರೆ ಎಂದು ಜೆನ್ಸೆನ್​ ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಜೆನ್​ ಸಾಕಿ, ಏಕೆಂದರೆ ಜೋ ಬಿಡೆನ್​ ಗರ್ಭಪಾತವು ಹೆಣ್ಣಿನ ದೇಹಕ್ಕೆ ಸಂಬಂಧಿಸಿದ್ದು. ಹೀಗಾಗಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಆಕೆಗೆ ಇದೆ ಎಂದು ನಂಬಿದ್ದಾರೆ ಎಂದು ಹೇಳಿದ್ರು.

ಈ ವಿಚಾರದಲ್ಲಿ ಹೆಣ್ಣು ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರ್ಯಳಾಗಿರಬೇಕು ಎಂದು ಬಿಡೆನ್​ ನಂಬಿದ್ದಾರೆ. ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರ ಮಹಿಳೆಗೆ ಸಿಗಬೇಕು. ನನಗೆ ತಿಳಿದ ಹಾಗೆ ನೀವು ಎಂದೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲು ಸಾಧ್ಯವೇ ಇಲ್ಲ. ಅಥವಾ ನೀವೆಂದಿಗೂ ಗರ್ಭಿಣಿ ಆಗಲು ಕೂಡ ಸಾಧ್ಯವಿಲ್ಲ. ಆದರೆ ಗರ್ಭಾವಸ್ಥೆಯ ಸವಾಲುಗಳನ್ನು ಎದುರಿಸುವವರಿಗೆ ಮಾತ್ರ ಈ ಕಷ್ಟದ ಬಗ್ಗೆ ತಿಳಿದಿರುತ್ತದೆ. ಹೀಗಾಗಿ ಮಹಿಳೆಯ ನಿರ್ಧಾರವನ್ನು ಗೌರವಿಸಬೇಕು ಜೆನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...