alex Certify ರಾಹುಲ್‌ ದ್ರಾವಿಡ್‌ ಅವರ ಹೃದಯ ವೈಶಾಲ್ಯತೆ ನೆನೆದ ಪೃಥ್ವಿ ಶಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್‌ ದ್ರಾವಿಡ್‌ ಅವರ ಹೃದಯ ವೈಶಾಲ್ಯತೆ ನೆನೆದ ಪೃಥ್ವಿ ಶಾ

ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 8 ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ತಮ್ಮ ಕಠಿಣ ದಿನಗಳನ್ನ ನೆನೆದಿದ್ದಾರೆ. ಹಾಗೂ ಈ ಕಠಿಣ ದಿನಗಳಲ್ಲಿ ತಮಗೆ ಟೀಂ ಇಂಡಿಯಾ ಕಂಡ ಶ್ರೇಷ್ಟ ಆಟಗಾರನಿಂದ ಸಿಕ್ಕ ಮಾರ್ಗದರ್ಶನದ ಬಗ್ಗೆಯೂ ಮಾಹಿತಿ ನೀಡಿದ್ರು.

ಮುಂಬೈ ಮೂಲದ ಯುವ ಬ್ಯಾಟ್ಸಮನ್​ ಟೀಂ ಇಂಡಿಯಾದಲ್ಲಿ ತಮ್ಮ ಭವಿಷ್ಯವನ್ನ ಭದ್ರ ಮಾಡಿಕೊಳ್ಳಬೇಕಾದ ಸಂದರ್ಭದಲ್ಲೇ ಕಠಿಣ ಸವಾಲುಗಳನ್ನ ಎದುರಿಸಿದ್ದರು. ಟೆಸ್ಟ್​ ತಂಡದಲ್ಲಿ ಆರಂಭಿಕ ಬ್ಯಾಟ್ಸ್​ಮ್ಯಾನ್​ ಆಗಿ ಕಣಕ್ಕಿಳಿಯಬೇಕಾದ ಸಂದರ್ಭದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು.

ಇದಾದ ಬಳಿಕ 2019ರಲ್ಲಿ ಟೀಂ ಇಂಡಿಯಾಗೆ ಹಿಂದಿರುಗಬೇಕು ಅನ್ನೋವಾಗಲೇ ಕೆಮ್ಮು ನಿವಾರಣೆಯಾಗಲೆಂದು ತೆಗೆದುಕೊಂಡ ಸಿರಪ್​ನಲ್ಲಿ ನಿಷೇಧಿತ ಮದ್ದು ಇದ್ದಿದ್ದರಿಂದ 8 ತಿಂಗಳು ನಿಷೇಧ ಅನುಭವಿಸಬೇಕಾಯ್ತು. ಇದರಿಂದಾಗಿ ಅವರಿಗೆ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ದೂರ ಉಳಿಯಬೇಕಾಗಿ ಬಂತು. ಇದಾದ ಬಳಿಕಕ 2020ರಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪ್ರವಾಸದಲ್ಲಿ ಟೀಂ ಇಂಡಿಯಾ ಪರವಾಗಿ ಆಡಿದ್ದರು.

ಆದರೆ ನಿಷೇಧದ ಶಿಕ್ಷೆಗೆ ಒಳಗಾಗಿದ್ದ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ತಮ್ಮನ್ನ ಯಾವ ರೀತಿ ಸಂತೈಸಿದ್ದರು ಅನ್ನೋದನ್ನ ನೆನೆಸಿಕೊಂಡಿದ್ದಾರೆ. ಇವೆಲ್ಲವೂ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದ್ದರು. ಇದರಲ್ಲಿ ನನ್ನ ತಪ್ಪು ಏನೂ ಇರಲಿಲ್ಲ. ನಾನು ಇನ್ನಷ್ಟು ಸದೃಢ ವ್ಯಕ್ತಿಯಾಗಿ ಹಿಂತಿರುಗಿದೆ. ಆದರೆ ಈ ಕಷ್ಟದ ಸಂದರ್ಭದಲ್ಲಿ ಅವರು ನನ್ನನ್ನ ಕರೆಸಿಕೊಂಡು ಸಮಾಧಾನ ಮಾಡಿದ್ದೇ ನನಗೆ ತುಂಬಾ ಸಂತಸವಾಗಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...