alex Certify ವಿದೇಶಕ್ಕೆ ಹೋಗುವವರಿಗೊಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಕ್ಕೆ ಹೋಗುವವರಿಗೊಂದು ಮಹತ್ವದ ಮಾಹಿತಿ

ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಅರ್ಧದಷ್ಟು ಜನರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಪರಿಸ್ಥಿತಿ ನಿಧಾನಕ್ಕೆ ಬದಲಾಗ್ತಿದ್ದಂತೆ ಜನರು ಮನೆಯಿಂದ ಹೊರ ಬರ್ತಿದ್ದಾರೆ. ಅನೇಕರು ವಿದೇಶಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದಾರೆ. ನೀವೂ ವಿದೇಶಕ್ಕೆ ಹೋಗುವ ಪ್ಲಾನ್ ನಲ್ಲಿದ್ದರೆ ಮೊದಲು ಆಯಾ ದೇಶಗಳ ಕೊರೊನಾ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

ಅನೇಕ ದೇಶಗಳಲ್ಲಿ ಕೊರೊನಾ ಲಸಿಕೆ ಕಡ್ಡಾಯವಾಗಿದೆ. ಕೊರೊನಾ ಲಸಿಕೆ ಪಡೆಯದ ಪ್ರವಾಸಿಗರು ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ಕೆಲ ದೇಶಗಳು ಕೊರೊನಾ ಲಸಿಕೆ ಪ್ರಮಾಣ ಪತ್ರವನ್ನು, ಪಾಸ್ಪೋರ್ಟ್ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿವೆ.

Shocking: ಕೋವ್ಯಾಕ್ಸಿನ್‌ ಲಸಿಕೆಗೆ ಇನ್ನೂ ಸಿಕ್ಕಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಪಾಸ್‌ಪೋರ್ಟ್‌ನೊಂದಿಗೆ ಕೊರೊನಾ ಪ್ರಮಾಣಪತ್ರವನ್ನು ಲಿಂಕ್ ಮಾಡಿದ್ರೆ, ವಿದೇಶಿ ಪ್ರಯಾಣಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ  ಕೊರೊನಾ ಲಸಿಕೆ ಪ್ರಮಾಣಪತ್ರವನ್ನು, ಪಾಸ್‌ಪೋರ್ಟ್‌ನೊಂದಿಗೆ ಸುಲಭವಾಗಿ ಲಿಂಕ್ ಮಾಡಬಹುದು.

ಮೊದಲು ಕೋವಿನ್ www.cowin.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಲಾಗಿನ್ ಆದ ನಂತರ ಹೋಮ್ ಪೇಜ್ ನಲ್ಲಿರುವ ಸಪೋರ್ಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಮೂರು ಆಯ್ಕೆ ಕಾಣಿಸಲಿದೆ. ಅದ್ರಲ್ಲಿ ಪ್ರಮಾಣಪತ್ರ ತಿದ್ದುಪಡಿಗಳ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ಲಸಿಕೆ ಸ್ಥಿತಿ ಬಗ್ಗೆ ಮಾಹಿತಿ ಇರಲಿದೆ. ಅಲ್ಲಿ Raise an Issue ಮೇಲೆ ಕ್ಲಿಕ್ ಮಾಡಿದ ನಂತ್ರ, ಪಾಸ್‌ಪೋರ್ಟ್ ವಿವರಗಳನ್ನು ಸೇರಿಸಿ ಕ್ಲಿಕ್ ಮಾಡಬೇಕು. ಲಸಿಕೆಯ ವಿವರಗಳನ್ನು ಸೇರಿಸಲು ಬಯಸುವವರ ಪಾಸ್ಪೋರ್ಟ್‌ನ ಹೆಸರು ಮತ್ತು ಪಾಸ್ಪೋರ್ಟ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ವಿವರಗಳನ್ನು ಸಲ್ಲಿಸಿದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಇದರ ನಂತರ, ಕೋವಿನ್ ಆಪ್‌ನಿಂದ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು. ಇದರಲ್ಲಿ  ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...