alex Certify ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸದ್ದು ಮಾಡಿದೆ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಈ​​ ಹಾಡು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸದ್ದು ಮಾಡಿದೆ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಈ​​ ಹಾಡು….!

ಇಸ್ರೇಲಿ ಈಜುಪಟುಗಳಾದ ಎಡೆನ್​ ಬ್ಲೆಚರ್​ ಹಾಗೂ ಶೆಲ್ಲಿ ಬೊಬ್ರಿಟ್ಸ್ಕಿ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​​ರ ಆಜಾ ನಚಲೆ ಹಾಡಿಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯರ ಸಂತಸಕ್ಕೆ ಕಾರಣರಾಗಿದ್ದಾರೆ. ಆರ್ಟಿಸ್ಟಿಕ್​​ ಸ್ವಿಮ್ಮಿಂಗ್​ ಡ್ಯೂಯಟ್​​ ಫ್ರೀ ಪೂರ್ವಭಾವಿ ಆವೃತ್ತಿಯಲ್ಲಿ ಈ ಪ್ರದರ್ಶನ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮಾಧುರಿ ದೀಕ್ಷಿತ್​​ರ ಆಜಾ ನಚಲೆ ಸಿನಿಮಾ ತೆರೆಕಂಡು 13 ವರ್ಷಗಳೆ ಕಳೆಯುತ್ತಾ ಬಂದಿದೆ. ಬರೊಬ್ಬರಿ 5 ವರ್ಷಗಳ ಗ್ಯಾಪ್​ನ ಬಳಿಕ ಮಾಧುರಿ ದೀಕ್ಷಿತ್​ ಈ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಮ್​ಬ್ಯಾಕ್​ ಮಾಡಿದ್ದರು. ಇದೀಗ ಈ ವಿಶೇಷ ಹಾಡಿಗೆ ಇಸ್ರೆಲಿ ಈಜುಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು ಮಾಧುರಿ ದೀಕ್ಷಿತ್​ ಅಭಿಮಾನಿಗಳು ಫುಲ್​ ಫಿದಾ ಆಗುವಂತೆ ಮಾಡಿದ್ದಾರೆ.

ಶೆಲ್ಲಿ ಹಾಗೂ ಈಡೆನ್​​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗುವಲ್ಲಿ ವಿಫಲರಾದರೂ ಸಹ ಅನೇಕ ಭಾರತೀಯರ ಮನಸ್ಸನ್ನು ಗೆಲ್ಲುವಲ್ಲಿ ಈ ಈಜುಪಟುಗಳು ಯಶಸ್ವಿಯಾಗಿದ್ದಾರೆ. ಇದೀಗ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.

— ???? ????? (@AnneDanam) August 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...