alex Certify ಹಳ್ಳಿಗೆ ನುಗ್ಗಿದ ಇಸ್ಲಾಮಿಕ್ ಉಗ್ರರಿಂದ ಅಟ್ಟಹಾಸ: 50 ಮಂದಿ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳ್ಳಿಗೆ ನುಗ್ಗಿದ ಇಸ್ಲಾಮಿಕ್ ಉಗ್ರರಿಂದ ಅಟ್ಟಹಾಸ: 50 ಮಂದಿ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯ

ಮಾವುಟೋ: ಇಸ್ಲಾಮಿಕ್ ಉಗ್ರರು ಅಟ್ಟಹಾಸ ಮೆರೆದಿದ್ದು 50 ಮಂದಿ ಶಿರಚ್ಛೇದ ಮಾಡಿದ್ದಾರೆ. ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶದ ಕ್ಯಾಬೋ ಡೆಲಾಂಗೋ ಪ್ರದೇಶದಲ್ಲಿ ಘಟನೆ ನಡೆದಿದೆ.

ಮುತಾಡಿ ಎಂಬ ಹಳ್ಳಿಯಲ್ಲಿ ಇಸ್ಲಾಮಿಕ್ ಉಗ್ರರು ಗುಂಡಿನ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿದ್ದಾರೆ. ದಾಳಿಯ ವೇಳೆ ಪರಾರಿಯಾಗಲು ಯತ್ನಿಸಿದ 50 ಕ್ಕೂ ಅಧಿಕ ಮಂದಿಯನ್ನು ಮೈದಾನಕ್ಕೆ ಎಳೆತಂದು ತಲೆ ಕಡಿದು ಅಟ್ಟಹಾಸ ಮೆರೆದಿದ್ದಾರೆ. ಬಳಿಕ ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಅಲ್ಲೇ ಎಸೆದಿದ್ದಾರೆ. ಮೈದಾನದಲ್ಲಿ ಮೃತದೇಹಗಳ ರಾಶಿಯೇ ಬಿದ್ದಿದೆ.

ಉಗ್ರರ ಈ ಪೈಶಾಚಿಕ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತೈಲ ಸಂಪದ್ಭರಿತ ಪ್ರದೇಶವಾಗಿರುವ ಕ್ಯಾಬೋ ಡೆಲಾಂಗೋ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಬಂಡುಕೋರರ ಪ್ರಾಬಲ್ಯ ಹೆಚ್ಚಾಗಿದೆ. ಈ ಪ್ರಾಂತ್ಯದಲ್ಲಿ 2017 ರಿಂದ ದಾಳಿ ನಡೆಸಿ 2 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿದೆ. ಮತ್ತೊಮ್ಮೆ ಇಸ್ಲಾಮಿಕ್ ಉಗ್ರರು ಪೈಶಾಚಿಕ ಕೃತ್ಯವೆಸಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...