alex Certify ಶ್ರೀಲಂಕಾ ವಿರುದ್ಧದ ಸರಣಿಗೆ ಗೈರಾದರೂ ಮೈದಾನದಲ್ಲಿ ಕಾಣಿಸಿಕೊಂಡ್ರಾ ಕೊಹ್ಲಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾ ವಿರುದ್ಧದ ಸರಣಿಗೆ ಗೈರಾದರೂ ಮೈದಾನದಲ್ಲಿ ಕಾಣಿಸಿಕೊಂಡ್ರಾ ಕೊಹ್ಲಿ….?

Kohli's 'Lookalike' Made His ODI Debut Against Sri Lanka. Can You Guess the Cricketer?

ಕೊಲೊಂಬೋ: ಗಡ್ಡ ಬಿಟ್ಟಿರುವ ವಿರಾಟ್ ಕೊಹ್ಲಿಯನ್ನು ನೋಡಿದ್ದೀರಿ. ಆದರೆ ಟೀಂ ಇಂಡಿಯಾ ಕ್ರಿಕೆಟ್ ಟೀಂ ನಾಯಕ ಫುಲ್ ಶೇವ್ ಮಾಡಿ ಮೈದಾನದಲ್ಲಿ ಆಡುತ್ತಿರುವ ದೃಶ್ಯ ನೋಡಿದ್ದೀರಾ..? ಅರೆ ಇವರೇನು ಹೇಳುತ್ತಿದ್ದಾರೆ ಅಂತಾ ಶಾಕ್ ಆಯ್ತಾ..? ಈ ಸ್ಟೋರಿ ಓದಿ..

ನಾಯಕ ವಿರಾಟ್ ಕೊಹ್ಲಿ ಗೈರಿನಲ್ಲಿ ಶಿಖರ್ ಧವನ್ ನೇತೃತ್ವದಲ್ಲೀ ಟೀಂ ಇಂಡಿಯಾ ತಂಡವು ಶ್ರೀಲಂಕಾದಲ್ಲಿ ಏಕದಿನ ಸರಣಿ ಆಡುತ್ತಿದೆ. ಈಗಾಗಲೇ 1-0 ಅಂತರದಿಂದ ಮುನ್ನಡೆ ಕೂಡ ಸಾಧಿಸಿದೆ. ವಿರಾಟ್ ಕೊಹ್ಲಿ ಸೇರಿದಂತೆ ಟೀ ಇಂಡಿಯಾ ಹಿರಿಯರ ತಂಡಕ್ಕೆ ಶ್ರೀಲಂಕಾ ಪ್ರವಾಸದಿಂದ ಬ್ರೇಕ್ ನೀಡಲಾಗಿದೆ.

ʼಸೆಕ್ಸ್ʼ ನಿರ್ಬಂಧಿಸಲು ಆಟಗಾರರಿಗೆ ನೀಡಲಾಗಿದೆಯಾ ಈ ಮಂಚ…? ಗೊಂದಲಗಳಿಗೆ ತೆರೆ ಎಳೆದ ಒಲಂಪಿಕ್‌ ಸಂಘಟಕರು

ಆದರೆ ಮೈದಾನದಲ್ಲಿ ವಿರಾಟ್ ಕಾಣಿಸಿದರು ಅಂತಾ ಅಭಿಮಾನಿಯೊಬ್ಬ ಫೋಟೋ ಸಮೇತ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗಿದ್ದು, ತರಹೇವಾರಿ ಕಮೆಂಟ್ ಗಳು ಬರಲಾರಂಭಿಸಿವೆ. ಹೌದು, ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಯುವ ತಂಡ ಆಡುತ್ತಿದೆ. ಐಪಿಎಲ್ ನಲ್ಲಿ ಆಡುತ್ತಿದ್ದ ಇಶಾನ್ ಕಿಶಾನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರನ್ನು ನೋಡಿದ ಅಭಿಮಾನಿಗಳಿಗೆ ಕ್ಲೀನ್ ಶೇವ್ ಮಾಡಿದ ಕೊಹ್ಲಿಯಂತೆ ಕಂಡಿದ್ದಾರೆ.

ಕ್ಲೀನ್ ಶೇವ್ಡ್ ವಿರಾಟ್ ಕೊಹ್ಲಿ ಅಂತಾ ಅಭಿಮಾನಿಯೊಬ್ಬ ನಗೆ ಬೀರುತ್ತಾ ಫೋಟೋ ಸಮೇತಾ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಹಲವಾರು ಮಂದಿ ಪ್ರತಿಕ್ರಿಸಿದ್ದು, ಬಹು ವ್ಯಕ್ತಿತ್ವದ ಇಶಾನ್ ಕಿಶಾನ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...