alex Certify ಪದವಿ ಪ್ರಮಾಣಪತ್ರ ಎಂಬುದು ಬರಿ ಒಂದು ಹಾಳೆ: ಐಎಎಸ್‌ ಅಧಿಕಾರಿಯ ವಿವಾದಾತ್ಮಕ ಟ್ವೀಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ಪ್ರಮಾಣಪತ್ರ ಎಂಬುದು ಬರಿ ಒಂದು ಹಾಳೆ: ಐಎಎಸ್‌ ಅಧಿಕಾರಿಯ ವಿವಾದಾತ್ಮಕ ಟ್ವೀಟ್‌

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಮನೆಯ ಒಳಗೇ ಇರೋದು ಅವಶ್ಯ ಬಿದ್ದರೆ ಮಾತ್ರ ಮನೆಯ ಹೊರಗೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.‌

ವಿದ್ಯಾರ್ಥಿಗಳಿಗೆ ಆನ್​ಲೈನ್​ ಶಿಕ್ಷಣ ನೀಡಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್​, ಶಾಲಾ ಶಿಕ್ಷಣ ಇವೆಲ್ಲವನ್ನ ಮಿಸ್​ ಮಾಡಿಕೊಳ್ತಿರುವ ಈ ಸಮಯದಲ್ಲೇ ಐಎಎಸ್​ ಅಧಿಕಾರಿಯೊಬ್ಬರು ಶಿಕ್ಷಣದ ಬಗ್ಗೆ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಗ್ರಾಸವಾಗಿದೆ.

ಐಎಎಸ್​ ಅಧಿಕಾರಿ ಜಿತಿನ್ ​ಯಾದವ್​ ಎಂಬವರು ಟ್ವಿಟರ್​​ನಲ್ಲಿ ನಿಮ್ಮ ಪದವಿಗಳು ಕೇವಲ ಒಂದು ಕಾಗದದ ಹಾಳೆಯಷ್ಟೇ. ನಿಜವಾದ ಪದವಿಯು ನಮ್ಮ ವರ್ತನೆ, ಅನುಭವಗಳ ಮೇಲೆ ಅವಲಂಬಿತವಾಗಿದೆ ಎಂದು ಬರೆದಿದ್ದರು. ಶಿಕ್ಷಣದ ವಿಚಾರದಲ್ಲಿ ಯಾದವ್​ ನೀಡಿರುವ ಈ ಹೇಳಿಕೆಗೆ ಸೋಶಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಯಾದವ್​ರ ಈ ಮಾತಿಗೆ ತಲೆಬಾಗಿದ್ದರೆ ಬಹುತೇಕ ಮಂದಿ ಭಾರತೀಯ ಶಿಕ್ಷಣ ಪದ್ಧತಿಯ ಪರವಾಗಿ ಧ್ವನಿಯೆತ್ತಿದ್ದನ್ನ ಕಾಣಬಹುದಾಗಿದೆ .

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...