alex Certify ತನ್ನ ಬಾಯಿಂದ ಹೊಗೆ ಬಿಡುತ್ತೆ ಈ ಹಕ್ಕಿ…! ಅಚ್ಚರಿಗೊಳಿಸಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಬಾಯಿಂದ ಹೊಗೆ ಬಿಡುತ್ತೆ ಈ ಹಕ್ಕಿ…! ಅಚ್ಚರಿಗೊಳಿಸಿದ ವಿಡಿಯೋ

ಸಣ್ಣ ಪಕ್ಷಿಯೊಂದು ತನ್ನ ಬಾಯಿಯಿಂದ ಹೊಗೆ ಬಿಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಸ್ಮೋಕಿಂಗ್ ಬರ್ಡ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ಈಗ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆಯುತ್ತಿದೆ.

ಹಸಿರು ನೀಲಿ ತಲೆ ಮತ್ತು ಕುತ್ತಿಗೆಯನ್ನು ಹೊಂದಿರುವ ಬಿಳಿ ಹಕ್ಕಿ ಹೊಗೆಯನ್ನು ಹೊರಹಾಕುವ ಮೊದಲು ಹಲವಾರು ಬಾರಿ ಶಿಳ್ಳೆ ಹೊಡೆಯಲು ಬಾಯಿ ತೆರೆಯುತ್ತದೆ.

ಹೊಗೆ ಬಿಡುವುದು ಅವಾಸ್ತವ ಎನಿಸಿದರೂ ಕಣ್ಣಲ್ಲಿ‌ ಕಣ್ಣಿಟ್ಟು ನೋಡಿದಾಗ ನೈಜತೆ ತಿಳಿಯಲಿದೆ. ವೈರಲ್ ವಿಡಿಯೋ 2.8 ಲಕ್ಷ ವೀಕ್ಷಣೆಗಳೊಂದಿಗೆ ನೆಟ್ಟಿಗರ ಗಮನ ಸೆಳೆದಿದೆ. ಈ ಪಕ್ಷಿ ಯಾವ ಜಾತಿಯೆಂದು ಆಶ್ಚರ್ಯ ಪಟ್ಟಿದ್ದು, ಈ ಪಕ್ಷಿಯನ್ನು ಎಲ್ಲಿ ನೋಡಬಹುದು ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.

ಬೇರ್- ಥ್ರೋಟೆಡ್ ಬೆಲ್ ಬರ್ಡ್ಸ್ ಗಂಡು ಮತ್ತು ಹೆಣ್ಣು ಜಾತಿಗಳಿಗೆ ವಿಭಿನ್ನ ಹೊದಿಕೆ ಹೊಂದಿರುತ್ತವೆ. ವೀಡಿಯೋದಲ್ಲಿರುವುದು ಗಂಡು ಪಕ್ಷಿ ಆಗಿರಬಹುದು. ಅವು ದಕ್ಷಿಣ ಅಮೆರಿಕಾದ ಅಟ್ಲಾಂಟಿಕ್ ಮಳೆಕಾಡಿನಲ್ಲಿ ಪ್ರತ್ಯೇಕವಾಗಿ ಕಂಡುಬರುತ್ತವೆ.

— Ananth Rupanagudi (@Ananth_IRAS) October 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...