alex Certify ಸ್ವಾತಂತ್ರ್ಯ ದಿನದಿಂದ ಓಲಾ ಎಲೆಕ್ಟ್ರಿಕ್​ ಕಾರು ಅನಾವರಣ….?‌ ಮಹತ್ವದ ಸುಳಿವು ನೀಡಿದ ಸಿಇಒ ಭವಿಶ್​ ಅಗರ್ವಾಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ಯ ದಿನದಿಂದ ಓಲಾ ಎಲೆಕ್ಟ್ರಿಕ್​ ಕಾರು ಅನಾವರಣ….?‌ ಮಹತ್ವದ ಸುಳಿವು ನೀಡಿದ ಸಿಇಒ ಭವಿಶ್​ ಅಗರ್ವಾಲ್​

ಓಲಾ ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ದೇಶಾದ್ಯಂತ ಸಂಚಲನ ಮೂಡಿಸಿದೆ. ಜನರ ಬೇಡಿಕೆಯನ್ನು ಪೂರೈಸಲಾಗದೇ ಓಲಾ ಪರದಾಡುತ್ತಿದೆ. ಈ ನಡುವೆಯೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಎಲೆಕ್ಟ್ರಿಕ್​ ಕಾರಿನ ಬಗ್ಗೆ ಮಹತ್ವದ ಘೋಷಣೆಗೆ ಮುಂದಾಗಿದೆ.

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್​ ಅಗರ್ವಾಲ್​ ಅವರು ಶುಕ್ರವಾರ ಭಾರತದಲ್ಲಿ ಎಲೆಕ್ಟ್ರಿಕ್​ ಸ್ಪೋರ್ಟ್ಸ್​ ಕಾರನ್ನು ಘೋಷಿಸುವ ಮಹತ್ವದ ಸುಳಿವು ನೀಡಿದ್ದಾರೆ. ಟ್ವಿಟರ್​ನಲ್ಲಿ ಅಗರ್ವಾಲ್​, ಪಿಕ್ಚರ್​ ಅಭಿ ಬಾಕಿ ಹೈ ಮೇರೇ ದೋಸ್ತ್​. ಆಗಸ್ಟ್​ 15ರಂದು ಮಧ್ಯಾಹ್ನ 2 ಗಂಟೆಗೆ ಭೇಟಿಯಾಗೋಣ ಎಂದು ಪೋಸ್ಟ್​ ಮಾಡಿದ್ದಾರೆ.

ಟೀಸರ್​ ವಿಡಿಯೊದಂತೆ ರಸ್ತೆಯಲ್ಲಿ ಕಾರು ಓಡುವ ವಿಡಿಯೋವನ್ನು ತಮ್ಮ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಓಲಾ ಭಾರತಕ್ಕೆ ಎಲೆಕ್ಟ್ರಿಕ್​ ಸ್ಪೋರ್ಟ್ಸ್​ ಕಾರನ್ನು ಹೊರತರಲು ಯೋಜಿಸುತ್ತಿದೆ ಎಂದು ಕೆಲವೇ ವಾರಗಳ ಹಿಂದೆ ಅವರು ಹೇಳಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ಟ್ವೀಟ್​ ಬಂದಿದೆ.

ಪ್ರಸ್ತುತ, ಓಲಾ ಎಲೆಕ್ಟ್ರಿಕ್​ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್​ಗಳನ್ನು ಉತ್ಪಾದಿಸುತ್ತಿದೆ. ಈಗ ಸಂಸ್ಥೆಯು ಎಲೆಕ್ಟ್ರಿಕ್​ ಕಾರನ್ನು ಬಿಡುಗಡೆ ಮಾಡಿದರೆ, ಆ ಮೂಲಕ ಮಾರುಕಟ್ಟೆಯಲ್ಲಿ ಪ್ರಮುಖ ಪ್ಲೇಯರ್​ಗಳ ಜತೆಗೆ ಸ್ಪರ್ಧೆಗಿಳಿಯುವುದು ದಿಟ.

ಈಗಾಗಲೇ ಮಾರುಕಟ್ಟೆಯಲ್ಲಿ ಚಾಲನೆಯಲ್ಲಿರುವ ಟಾಟಾ ಮೋಟಾರ್ಸ್ ಮತ್ತು ಎಂಜಿ, ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಮಾದರಿಗಳ ಎಲೆಕ್ಟ್ರಿಕ್​ ಎಡಿಷನ್​ಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಹ್ಯುಂಡೈ, ಕಿಯಾ ಮೋಟಾರ್ಸ್​ ಮತ್ತು ಮೋಲ್ವೋ ಸಹ ಭಾರತಕ್ಕೆ ಇವಿ ರೂಪಾಂತರಗಳನ್ನು ತರಲು ಯೋಜಿಸುತ್ತಿವೆ.

ಇತ್ತೀಚೆಗೆ, ಓಲಾ ಎಲೆಕ್ಟ್ರಿಕ್​ ಬ್ಯಾಟರಿ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ 500 ಮಿಲಿಯನ್​ ಡಾಲರ್ ಹೂಡಿಕೆಯನ್ನು ಘೋಷಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...