alex Certify ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ

ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯೂ ಸೇರಿದಂತೆ ಹಲವು ಕಾರಣಗಳಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದೂ ಇದಕ್ಕೊಂದು ಕಾರಣವಿರಬಹುದು. ಇದನ್ನು ಸರಿಪಡಿಸುವುದು ಹೇಗೆ ನೋಡೋಣ.

ರಕ್ತಹೀನತೆಗೆ ಕಬ್ಬಿಣಾಂಶದ ಕೊರತೆಯೇ ಮುಖ್ಯ ಕಾರಣ. ಇದರಿಂದ ಸುಸ್ತು, ಆಯಾಸ ಹೆಚ್ಚುತ್ತದೆ. ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಕಣ್ಣಿನ ಒಳಭಾಗ, ನಾಲಿಗೆ ತುಟಿ ಬಿಳಿಚಿಕೊಳ್ಳುತ್ತದೆ. ಕೂದಲು ವಿಪರೀತ ಉದುರುತ್ತದೆ. ಕೆಲವರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

ಇದನ್ನು ಸರಿಪಡಿಸಲು ನಿತ್ಯ ಆಹಾರದ ರೂಪದಲ್ಲಿ ಅಥವಾ ಜ್ಯೂಸ್ ತಯಾರಿಸುವಾಗ ಬೆಲ್ಲ ಬಳಸಿ. ಇದರಲ್ಲಿರುವ ಕಬ್ಬಿಣಾಂಶ ನಿಮ್ಮ ರಕ್ತಹೀನತೆ ಸಮಸ್ಯೆಯನ್ನು ದೂರಪಡಿಸಲು ನೆರವಾಗುತ್ತದೆ. ಸಲಾಡ್ ಅಥವಾ ಸಾಂಬಾರ್ ರೂಪದಲ್ಲಿ ಬೀಟ್ ರೂಟ್ ಸೇವಿಸಿ.

ಕಲ್ಲಂಗಡಿ ಹಣ್ಣು ನಿತ್ಯ ಸೇವಿಸಿ. ಕೆಲವೇ ದಿನಗಳಲ್ಲಿ ನಿಮ್ಮ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಕ್ಯಾರೆಟ್ ಅನ್ನು ಸಲಾಡ್ ರೂಪದಲ್ಲಿ ಸೇವಿಸಿ. ಜ್ಯೂಸ್ ಮಾಡಿ ಕುಡಿದರೆ ಬೆಲ್ಲ ಸೇರಿಸಿ.

ಬಾದಾಮಿ, ಒಣದ್ರಾಕ್ಷಿ ನಿತ್ಯ ತಿನ್ನಿ. ಸೊಪ್ಪು ಅದರಲ್ಲೂ ಹರಿವೆ, ಬಸಳೆ, ಪಾಲಕ್ ಸೊಪ್ಪುಗಳನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಉಪಯೋಗಿಸಿ. ಇದರಿಂದ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.

ದಾಳಿಂಬೆ ಜ್ಯೂಸ್ ಕುಡಿಯುವುದರಿಂದಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ನಿಮಗೆ ದೊರೆಯುತ್ತದೆ. ಊಟದ ಬಳಿಕ ಕಾಫಿ ಚಹಾ ಕುಡಿಯುವ ಅಭ್ಯಾಸವಿದ್ದರೆ ಮೊದಲು ಬಿಟ್ಟು ಬಿಡಿ. ಆಹಾರಕ್ಕೆ ಅತಿಯಾದ ಅರಶಿನವನ್ನೂ ಬಳಸದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...