alex Certify ಹರಾಜು ಸೈಟ್‌ನಲ್ಲಿ ಪತಿಯನ್ನೇ ಮಾರಾಟಕ್ಕಿಟ್ಟ ಪತ್ನಿ…! ಯಾವುದೇ ಕಾರಣಕ್ಕೂ ವಿನಿಮಯವಿಲ್ಲವೆಂಬ ಕಂಡೀಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜು ಸೈಟ್‌ನಲ್ಲಿ ಪತಿಯನ್ನೇ ಮಾರಾಟಕ್ಕಿಟ್ಟ ಪತ್ನಿ…! ಯಾವುದೇ ಕಾರಣಕ್ಕೂ ವಿನಿಮಯವಿಲ್ಲವೆಂಬ ಕಂಡೀಷನ್

ಇಬ್ಬರು ಮಕ್ಕಳನ್ನು ಕರೆದುಕೊಂಡು ಬೇಸಿಗೆ ರಜೆ ಕಳೆಯಲು ತನ್ನನ್ನು ಬಿಟ್ಟು ಹೋದ ಪತಿಯನ್ನ, ಆಕೆಯ ಪತ್ನಿಯೆ ಹರಾಜು ಸೈಟ್‌ನಲ್ಲಿ ಮಾರಾಟಕ್ಕಿಟ್ಟಿರುವ ಘಟನೆ ನ್ಯೂಜಿಲ್ಯಾಂಡ್ನಲ್ಲಿ ನಡೆದಿದೆ. ಟ್ರೇಡ್ ಮಿ ವೆಬ್‌ಸೈಟ್‌ನಲ್ಲಿ ಲಿಂಡಾ ಎನ್ನುವ ಐರಿಷ್ ಮಹಿಳೆ ತನ್ನ ಪತಿ ಜಾನ್ ಮ್ಯಾಕ್‌ಅಲಿಸ್ಟರ್ ಅವರನ್ನು ಮಾರಾಟಕ್ಕಿಟ್ಟಿದ್ದಾರೆ.

ಜಾನ್ ಅವರು ಆರು ಅಡಿ ಎತ್ತರವಿದ್ದು, 37 ವರ್ಷ ವಯಸ್ಸಾಗಿದೆ. ಕೃಷಿಕನಾಗಿರುವ ಇವರಿಗೆ ಈ ಹಿಂದೆಯೂ ಮಾಲೀಕರಿದ್ದು, ಸರಿಯಾದ ಸಮಯಕ್ಕೆ ಆಹಾರ ಮತ್ತು ನೀರು ನೀಡಿದರೆ ನಿಷ್ಠರಾಗಿ ಉಳಿಯುತ್ತಾರೆ ಎಂದು ಲಿಂಡಾ ವಿವರಿಸಿದ್ದಾರೆ. ಮಾರಾಟ ಅಂತಿಮ ಅಷ್ಟೇ, ಯಾವುದೇ ವಿನಿಮಯ ಅಥವಾ ರಿಟರ್ನ್ಸ್ ಇಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ಇದೆಂತಾ ಅವ್ಯವಸ್ಥೆ….? ಕಾರುಗಳ ಹೆಡ್​ಲೈಟ್​ ಬೆಳಕಲ್ಲಿ ಎಕ್ಸಾಂ ಬರೆದ ವಿದ್ಯಾರ್ಥಿಗಳು..!

ಈ ಬಗ್ಗೆ ತನ್ನ ಸ್ನೇಹಿತರಿಂದ ತಿಳಿದುಕೊಂಡ ಜಾನ್, ತನ್ನ ಪತ್ನಿ ಸಿಟ್ಟಿನಿಂದ ಮಾಡಿರುವ ಕೆಲಸಕ್ಕೆ ನಕ್ಕು ಸುಮ್ಮನಾಗಿದ್ದಾನೆ. ಜೊತೆಗೆ ತನಗೆ ಎಷ್ಟು ಮೌಲ್ಯ ಸಿಗಬಹುದು ಎಂದು ಜಾಹೀರಾತನ್ನ ವೀಕ್ಷಿಸುತ್ತಿದ್ದ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಾಫ್ ಐರಿಶ್ ಆಗಿರುವ ಜಾನ್ 2019ರಲ್ಲಿ, ಲಿಂಡಾ ಅವ್ರನ್ನ ಐರ್ಲೆಂಡ್‌ನಲ್ಲಿ ವಿವಾಹವಾದರು.

ಜಾನ್ ಅಂದುಕೊಂಡಂತೆ ಆತನನ್ನ ಪಡೆಯಲು, 12 ಬಿಡ್‌ಗಳು ಬಂದವು. ಕೆಲವೇ ಗಂಟೆಗಳಲ್ಲಿ ಬಿಡ್ಡಿಂಗ್NZD100 (ಸುಮಾರು ರೂ. 5,000) ಗೆ ಏರಿತು. ಆದರೆ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಮೂಲಕ ಪತಿಯ ಮಾರಾಟದ ಬಿಡ್ ಅನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ, ತಮ್ಮ ಸಂಗಾತಿಯನ್ನೆ ಮಾರಾಟಕ್ಕಿಟ್ಟಿರುವುದು ಇದೇ ಮೊದಲು ಎಂದು ಟ್ರೇಡ್ ಮಿ ಪಾಲಿಸಿ ಮತ್ತು ಅನುಸರಣೆಯ ಮ್ಯಾನೇಜರ್, ಜೇಮ್ಸ್ ರಯಾನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...