alex Certify BIG NEWS: ಬದಲಾಯ್ತು ಐಪಿಎಲ್ ಮೆಗಾ ಹರಾಜಿನ ದಿನಾಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬದಲಾಯ್ತು ಐಪಿಎಲ್ ಮೆಗಾ ಹರಾಜಿನ ದಿನಾಂಕ

ಐಪಿಎಲ್ 2022ರ ಪಂದ್ಯಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೆ ವಿಶ್ವದಾದ್ಯಂತ ಎಲ್ಲರೂ ಕುತೂಹಲದಿಂದ ಕಾಯ್ತಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಅನೇಕ ಬದಲಾವಣೆಯಾಗಲಿದೆ.

ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ. ಬುಧವಾರ ಬಿಸಿಸಿಐ ಫೆಬ್ರವರಿ 7-8 ರಂದು ಮೆಗಾ ಹರಾಜು ನಡೆಸುವುದಾಗಿ ಸುದ್ದಿ ಬಂದಿತ್ತು. ಆದ್ರೆ ಇಂದು ಮತ್ತೆ ದಿನಾಂಕ ಬದಲಾಗಿದೆ.

ಐಪಿಎಲ್ ಮೆಗಾ ಹರಾಜು ಫೆಬ್ರವರಿ 7-8 ರ ಬದಲು ಫೆಬ್ರವರಿ 11, 12 ಮತ್ತು 13 ರಂದು ನಡೆಯಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐನ ಕೆಲವು ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ.

ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜನ್ನು ಫೆಬ್ರವರಿ 7 ಮತ್ತು 8 ರಂದು ಬೆಂಗಳೂರಿನಲ್ಲಿ ಆಯೋಜಿಸಲಿದೆ ಎಂದು ಪಿಟಿಐ ವರದಿ ಮಾಡಿತ್ತು.

ಲಕ್ನೋ ಮತ್ತು ಅಹಮದಾಬಾದ್‌ ಹೊಸ ತಂಡ ಐಪಿಎಲ್ ಗೆ ಸೇರ್ಪಡೆಯಾಗ್ತಿದೆ. ಈ ವರ್ಷ ಐಪಿಎಲ್‌ನಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ಹರಾಜಿನಿಂದ ತಂಡಕ್ಕೆ ನಷ್ಟವಾಗಲಿದೆ ಎಂಬ ಅಭಿಪ್ರಾಯವಿದೆ. ಹಾಗಾಗಿ ಐಪಿಎಲ್ ನಲ್ಲಿ ಇದೇ ಕೊನೆಯ ಹರಾಜಾಗಬಹುದು ಎನ್ನಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...