alex Certify ʼಐಪಿಎಲ್ʼ ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಈವರೆಗೆ ಗಳಿಸಿರುವ ಹಣವೆಷ್ಟು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಐಪಿಎಲ್ʼ ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಈವರೆಗೆ ಗಳಿಸಿರುವ ಹಣವೆಷ್ಟು ಗೊತ್ತಾ…..?

ವಿಶ್ವದ ಅತ್ಯಂತ ಜನಪ್ರಿಯ ಟಿ 20 ಲೀಗ್ ಎಂದೇ ಪ್ರಸಿದ್ಧಿ ಪಡೆದಿರುವ ಐಪಿಎಲ್, ಅನೇಕ ಆಟಗಾರರಿಗೆ ವರವಾಗಿದೆ. ಆಟಗಾರರು ಐಪಿಎಲ್ ಹರಾಜಿಗೆ ಕಾತರದಿಂದ ಕಾಯುತ್ತಿದ್ದಾರೆ. ಹರಾಜಿನಲ್ಲಿ ಕೆಲವು ಆಟಗಾರರ ಭವಿಷ್ಯ ಬದಲಾಗುತ್ತದೆ. ಊಹೆಗೆ ಮೀರಿದ ಹರಾಜು ಇಲ್ಲಿ ನಡೆಯುತ್ತದೆ. ಕೆಲವೊಮ್ಮೆ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಆಟಗಾರರನ್ನು ಯಾವ ಫ್ರ್ಯಾಂಚೈಸಿ ಕೂಡ ಖರೀದಿ ಮಾಡುವುದಿಲ್ಲ. ಮತ್ತೆ ಕೆಲವೊಮ್ಮೆ, ಪ್ರಸಿದ್ಧಿ ಪಡೆಯದ ಆಟಗಾರರು ದುಬಾರಿ ಬೆಲೆಗೆ ಮಾರಾಟವಾಗ್ತಾರೆ. ಇದಕ್ಕೆ  ಕೃಷ್ಣಪ್ಪ ಗೌತಮ್, ಕ್ರಿಸ್ ಮೋರಿಸ್ ಮತ್ತು ಚೇತನ್ ಸಕಾರಿಯಾ ಉತ್ತಮ ನಿದರ್ಶನ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ನಲ್ಲಿ ಹಣ ಗಳಿಸುವ ಆಟಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಇದುವರೆಗೆ 150 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದ್ದಾರೆ. ಧೋನಿಯ ಈ ಗಳಿಕೆ ಒಂದು ದಾಖಲೆ. ಐಪಿಎಲ್ ಆರಂಭಿಕ ಪಂದ್ಯಾವಳಿಯಿಂದ ಇಲ್ಲಿಯವರೆಗೆ ಧೋನಿಯಷ್ಟು ಹಣವನ್ನು ಯಾವ ಆಟಗಾರರೂ ಗಳಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಧೋನಿಗೆ ಒಂದು ಋತುವಿಗೆ 15 ಕೋಟಿ ರೂಪಾಯಿ ನೀಡುತ್ತದೆ.

ಐಪಿಎಲ್ 2008 ರ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ ಮಹೇಂದ್ರ ಸಿಂಗ್ ಧೋನಿ. ಚೆನ್ನೈ ಸೂಪರ್ ಕಿಂಗ್ಸ್, ಮೊದಲ ಬಾರಿ 6 ಕೋಟಿ ರೂಪಾಯಿಗೆ ಧೋನಿ ಖರೀದಿ ಮಾಡಿತ್ತು. 2011 ರ ನಂತ್ರ ಧೋನಿ 8 ಕೋಟಿ 28 ಲಕ್ಷ ರೂಪಾಯಿ ಪಡೆಯಲು ಶುರು ಮಾಡಿದ್ದರು. 2014 ರ ಮೆಗಾ ಹರಾಜಿನ ನಂತರ, ಧೋನಿ ಸಂಭಾವನೆ 12 ಕೋಟಿ 50 ಲಕ್ಷಕ್ಕೆ ಏರಿತ್ತು. ಎರಡು ವರ್ಷಗಳ ಕಾಲ ಪುಣೆ ಪರ ಆಡಿದ್ದ ಧೋನಿ, 2018ರ ನಂತ್ರ ಚೆನ್ನೈ ತಂಡದಲ್ಲಿ ಮತ್ತೆ ಆಡ್ತಿದ್ದಾರೆ. ಧೋನಿ ಸಂಭಾವನೆ ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ 15  ಕೋಟಿ ರೂಪಾಯಿಯಾಗಿದೆ.

ಧೋನಿ ಐಪಿಎಲ್ ಗಳಿಕೆ ವಿವರ:

2021 ಚೆನ್ನೈ ಸೂಪರ್ ಕಿಂಗ್ಸ್ – 150,000,000

2020  ಚೆನ್ನೈ ಸೂಪರ್ ಕಿಂಗ್ಸ್ – 150,000,000

2019  ಚೆನ್ನೈ ಸೂಪರ್ ಕಿಂಗ್ಸ್ – 150,000,000

2018 ಚೆನ್ನೈ ಸೂಪರ್ ಕಿಂಗ್ಸ್ – 150,000,000

2017 ರೈಸಿಂಗ್ ಪುಣೆ ಸೂಪರ್‌ ಜೈಂಟ್ – 125,000,000

2016 ರೈಸಿಂಗ್ ಪುಣೆ ಸೂಪರ್‌ ಜೈಂಟ್ – 125,000,000

2015 ಚೆನ್ನೈ ಸೂಪರ್ ಕಿಂಗ್ಸ್ – 125,000,000

2014 ಚೆನ್ನೈ ಸೂಪರ್ ಕಿಂಗ್ಸ್ – 125,000,000

2013 ಚೆನ್ನೈ ಸೂಪರ್ ಕಿಂಗ್ಸ್ – 82,800,000

2012 ಚೆನ್ನೈ ಸೂಪರ್ ಕಿಂಗ್ಸ್ – 82,800,000

2011 ಚೆನ್ನೈ ಸೂಪರ್ ಕಿಂಗ್ಸ್ – 82,800,000

2010 ಚೆನ್ನೈ ಸೂಪರ್ ಕಿಂಗ್ಸ್ – 60,000,000

2009 ಚೆನ್ನೈ ಸೂಪರ್ ಕಿಂಗ್ಸ್ – 60,000,000

2008 ಚೆನ್ನೈ ಸೂಪರ್ ಕಿಂಗ್ಸ್ – 60,000,000

ಒಟ್ಟು ಗಳಿಕೆ – 1,528,400,000

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...